Karnataka Government : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್- ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲೂ ಬಿಸಿಯೂಟ ವಿತರಣೆ – ಸರ್ಕಾರದ ಮಹತ್ವದ ಆದೇಶ

Share the Article

Karnataka Government : ಬೇಸಿಗೆ ರಜೆಯಲ್ಲಿಯೂ ಕೂಡ 1-8ನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿ ಬಿಸಿ ಊಟವನ್ನು ನೀಡುವ ಕುರಿತಾಗಿ ಸರ್ಕಾರ ಮಹತ್ವದ ಆದೇಶವನ್ನು ಹೊರಟಿಸಿದೆ.

2024-25ನೇ ಸಾಲಿನ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳನ್ನು ಗುರುತಿಸಲಾಗಿದ್ದು ಈ ಸಂಬಂಧ 1-8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ ಅನುಷ್ಠಾನಗೊಳಿಸಿ ವಿತರಣೆ ಮಾಡಿರುವ ಸಂಬಂಧ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಸಂಬಂಧಿಸಿದಂತೆ ಕೇಂದ್ರದ ಪಾಲಿನ ಅನುದಾನ ರೂ.2958.87 ಲಕ್ಷಗಳು ಸಂವಾದಿ ರಾಜ್ಯದ ಪಾಲಿನ ಅನುದಾನ ರೂ 1742.74 ಲಕ್ಷಗಳು ಹಾಗೂ ರಾಜ್ಯದ ಹೆಚ್ಚುವರಿ ಅನುದಾನ (Top-up) ರೂ.2692.17 ಲಕ್ಷಗಳು ಸೇರಿ ಒಟ್ಟಾರೆಯಾಗಿ ರೂ.7393.78 ಲಕ್ಷಗಳ ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿರುತ್ತದೆ.

Comments are closed.