ED raids: ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ SDPI ಕಚೇರಿಗೆ ಈ.ಡಿ ದಾಳಿ!

Share the Article

ED raids: ನಿಷೇಧಿತ ಪಾಪ್ಯುಲ‌ರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಂಟು ಹೊಂದಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವಿರುದ್ಧ ಇರುವ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಅಧಿಕ ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಗುರುವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಝಿ ಅವರ ಬಂಧನದ ಬೆನ್ನಲ್ಲೇ ಇ.ಡಿ ದಾಳಿ (ED raids) ನಡೆಸಿದೆ.

ಮುಖ್ಯವಾಗಿ ದೆಹಲಿಯ ಎರಡು ಕಡೆಗಳಲ್ಲಿ ಹಾಗೂ ಕೇರಳದ ತಿರುವನಂತಪುರ ಮತ್ತು ಮಲಪ್ಪುರಂ, ಆಂಧ್ರಪ್ರದೇಶದ ನಂದ್ಯಾಲ್, ಜಾರ್ಖಂಡ್‌ನ ಪಾರ್ಕು, ಮಹಾರಾಷ್ಟ್ರದ ಠಾಣೆ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಲಖನೌ ಮತ್ತು ಜೈಪುರದಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Comments are closed.