Accident: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಮೂವರಿಗೆ ಸಣ್ಣಪುಟ್ಟ ಗಾಯ

Share the Article

Accident: ರಾಷ್ಟ್ರೀಯ ಹೆದ್ದಾರಿ 69 ರ ಸಾಗರ ರಸ್ತೆಯ ನೇದರಹಳ್ಳಿ ಬಳಿ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.
ಶುಕ್ರವಾರ (ಮಾ.07) ರ ಬೆಳಗ್ಗೆ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಗಂಡ, ಹೆಂಡತಿ, ಪುತ್ರಿ ಮೂರು ಜನರು ಅಪಾಯದಿಂದ ಪಾರಾಗಿದ್ದಾರೆ. ಮೂವರಿಗೂ ಸಣ್ಣ ಪುಟ್ಟ ಗಾಯವಾಗಿದೆ.

ಕಾರಿನಲ್ಲಿದ್ದರು ಸಾಗರದ ಎಸ್‌.ಎನ್.ನಗರದ ಮೂಲದವರು ಎಂದು ಪೊಲೀಸ್‌ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಕಾರು ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನೇದರಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿದೆ. ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿದ್ದ ಪ್ರಯಾಣಿಕರು ಇವರ ರಕ್ಷಣೆ ಮಾಡಿದ್ದಾರೆ.

Comments are closed.