Bihar: ಬೆಚ್ಚಿ ಬೀಳಿಸುವ ಘಟನೆ – ಯುವತಿ ಕಾಲಿಗೆ 12 ಮಳೆ ಹೊಡೆದು ಬರ್ಬರ ಹತ್ಯೆ

Share the Article

Bihar: ಬಿಹಾರದಲ್ಲಿ ಒಂದು ಪೈಶಾಚಕ ಕೃತ್ಯ ನಡೆದಿದ್ದು ಯುವತಿ ಕಾಲಿಗೆ ಬರೋಬ್ಬರಿ 12 ಮಳೆ ಹೊಡೆದು ಬರಬರವಾಗಿ ಹತ್ಯೆ ಮಾಡಲಾಗಿದೆ.

ಹೌದು, ಬಿಹಾರದ ಹರ್ನೌತ್ ಬ್ಲಾಕ್‌ನ ಸಾರ್ಥ ಪಂಚಾಯತ್ ವ್ಯಾಪ್ತಿಯ ಬಹದ್ದೂರ್‌ಪುರ ಗ್ರಾಮದಲ್ಲಿ ಭಯಭೀತರನ್ನಾಗಿಸುವ ಘಟನೆ ನಡೆದಿದೆ. ಬುಧವಾರ ಬೆಳಿಗ್ಗೆ, ಕೆಲವು ಗ್ರಾಮಸ್ಥರು ಹೆದ್ದಾರಿಯ ಕಾಡಿನ ಬಳಿ ಯುವತಿಯ ಶವವನ್ನು ನೋಡಿದ್ದಾರೆ. ಮೃತ ಯುವತಿ ಕೆಂಪು ಬಣ್ಣದ ನೈಟಿ ಧರಿಸಿದ್ದು, ಒಂದು ಕೈಯಲ್ಲಿ ಬ್ಯಾಂಡೇಜ್ ಕಟ್ಟಿಕೊಂಡಿದ್ದಳು. ಬಳಿಕ ಪರಿಶೀಲಿಸಿದಾಗ ಆಕೆಯ ಕಾಲಿಗೆ ಬರೋಬ್ಬರಿ 12 ಮೊಳೆಯನ್ನು ಹೊಡೆದು ಕೊಲ್ಲಲಾಗಿತ್ತು.

ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ, ಪೊಲೀಸರು ಸ್ಥಳಕ್ಕೆ ತಲುಪಿ, ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಬಿಹಾರ ಷರೀಫ್ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಹುಡುಗಿಯ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಇದೀಗ ತಿಳಿದಿದ್ದಾರೆ.

ಬಾಲಕಿಯ ಕೈಗೆ ಬ್ಯಾಂಡೇಜ್ ಹಾಕಲಾಗಿದ್ದ ರೀತಿ ನೋಡಿದರೆ, ಚಿಕಿತ್ಸೆಯ ಸಮಯದಲ್ಲಿ ಆಕೆ ಸಾವನ್ನಪ್ಪಿರಬಹುದು ಮತ್ತು ಪೊಲೀಸ್ ಪ್ರಕರಣವನ್ನು ತಪ್ಪಿಸಲು ಇಲ್ಲಿ ಎಸೆಯಲ್ಪಟ್ಟಿರಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ. ಅದೇ ಸಮಯದಲ್ಲಿ, ಕೆಲವರು ಇದನ್ನು ಮಾಟಮಂತ್ರ, ತಂತ್ರ-ಮಂತ್ರ ಅಥವಾ ನರಬಲಿಗೆ ಜೋಡಿಸುತ್ತಿದ್ದಾರೆ.

Comments are closed.