Sullia: ಮಾ.15ರಂದು ಸುಳ್ಯಕ್ಕೆ ನಂದಿ ರಥ ಯಾತ್ರೆ ಆಗಮನ!

Sullia: ಗೋ ಸೇವಾ ಗತಿವಿಧಿ ಕರ್ನಾಟಕ ಮತ್ತು ರಾಧ ಸುರಭಿ ಗೋ ಮಂದಿರ,ರಾಷ್ಟ್ರೀಯ ಗೋಸೇವಾ ಸಂಸ್ಥಾನ ವತಿಯಿಂದ ನಂದಿ ರಥಯಾತ್ರೆ ರಾಜ್ಯಾದ್ಯಂತ ಸಂಚಾರಿಸಲಿದ್ದು, ಮಾರ್ಚ್ 15 ರಂದು ಸುಳ್ಯಕ್ಕೆ (Sullia) ಆಗಮಿಸಲಿದೆ. ಈ ಕುರಿತು ಪೂರ್ವಭಾವಿ ಸಭೆ ಸುಳ್ಯ ಕೇರ್ಪಳದ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ಮಾ.5 ರಂದು ನಡೆಯಿತು.

ಅರೆಸ್ಸೆಸ್ ತಾಲೂಕು ಸಂಘಚಾಲಕ್ ತಳೂರು ಚಂದ್ರಶೇಖರ,ಅರೆಸ್ಸೆಸ್ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ್,ವಿಭಾಗ ಸಹ ಕಾರ್ಯವಾಹ ಸುಭಾಶ್ಚಂದ್ರ ಕಳಂಜ ರಥ ಯಾತ್ರೆ ಯ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ರಥಯಾತ್ರೆ ಸ್ವಾಗತ ಸಮಿತಿ ರಚಿಸಲಾಗಿದ್ದು ಅಧ್ಯಕ್ಷರಾಗಿ ಅಕ್ಷಯ್ ಕೆ.ಸಿ ಮತ್ತು ಕಾರ್ಯಾಧ್ಯಕ್ಷರಾಗಿ ಪತಂಜಲಿ ಭಾರದ್ವಾಜ ರವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್ ಅಂಗಾರ, ಡಾ. ಕೇಶವ ಸುಳ್ಳಿ, ಸುಧಾಕರ ಕಾಮತ್, ಡಾ. ಪುನೀತ್ ಸೋಣಂಗೇರಿ, ಡಾ.ನಿತಿನ್ ಪ್ರಭು, ಡಾ.ಸೂರ್ಯನಾರಾಯಣ ಬೆಳ್ಳಾರೆ ಡಾ. ಮೇಘಶ್ರೀ ಕಳಂಜ,ಪ್ರಧಾನ ಕಾರ್ಯದರ್ಶಿಗಳಾಗಿ ಜಗದೀಶ್ ಡಿ.ಪಿ., ಮತ್ತು ವಿಕ್ರಂ ಅಪ್ಪಂಗಾಯ, ಕೋಶಾಧಿಕಾರಿ ಯಾಗಿ ಸನತ್ ಪಿ.ಆರ್ ಮತ್ತು ಸಮಿತಿಯ ಗೌರವ ಸದಸ್ಯರನ್ನು ಘೋಷಿಸಲಾಯಿತು.
Comments are closed.