Madikeri: ಟೂತ್‌ಪೇಸ್ಟ್‌ ಟ್ಯೂಬ್‌ನಲ್ಲಿ ಮಾದಕ ವಸ್ತು ಪತ್ತೆ; ಆರೋಪಿಯ ಬಂಧನ

Share the Article

Madikeri: ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಕೈದಿಯೊಬ್ಬರಿಗೆ ಕೊಡಲೆಂದು ತಂದಿದ್ದ ಟೂತ್‌ಪೇಸ್ಟ್‌ ಟ್ಯೂಬ್‌ನಲ್ಲಿ ಮಾದಕ ವಸ್ತು ಪತ್ತೆಯಾಗಿರುವ ಘಟನೆ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಸುರಬೀಲ್‌ (26) ಎಂಬಾತ ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿರುವ ಸನಮ್‌ ಎಂಬಾತನಿಗೆ ಟೂತ್‌ಪೇಸ್ಟ್‌, ಟೂತ್‌ಬ್ರಷ್‌, ಸೋಪು ಮತ್ತು ಎಣ್ಣೆ ತಂದಿದ್ದ. ಕಾರಾಗೃಹ ಅಧೀಕ್ಷಕ ಸಂಜಯ್‌ ದತ್ತಿ ಪರಿಶೀಲನೆ ಮಾಡಿದಾಗ ಟೂತ್‌ಪೇಸ್ಟ್‌ನಲ್ಲಿ ಮಾದಕ ವಸ್ತು ಹ್ಯಾಶಿಶ್‌ ಇರುವುದು ಕಂಡು ಬಂದಿದೆ.

ಸನಮ್‌ ತಾನು ಆರೋಪಿಯ ಸಹೋದರ ಎಂದು ಹೇಳಿಕೊಂಡಿದ್ದ. ಇದೀಗ ಆರೋಪಿಯನ್ನು ಬಂಧನ ಮಾಡಿ 24 ಗ್ರಾಂ ಹ್ಯಾಶಿಶ್‌ ಅನ್ನು ವಶಪಡಿಸಲಾಗಿದೆ. ಮಡಿಕೇರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆರೋಪಿಯ ವಿಚಾರಣೆ ನಡೆಯುತ್ತಿದೆ.

Comments are closed.