Kalburgi: PUC ವಿದ್ಯಾರ್ಥಿನಿ ಬದಲು ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ಅರೆಸ್ಟ್!

Kalburgi: ರಾಜ್ಯಶಾಸ್ತ್ರ ಪರೀಕ್ಷೆಯನ್ನು ಪಿಯುಸಿ ವಿದ್ಯಾರ್ಥಿನಿ ಬದಲು ಕಾಂಗ್ರೆಸ್ ಕಾರ್ಯಕರ್ತೆಯನ್ನು ಪೊಲೀಸರು ಬಂಧನ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ವಿದ್ಯಾರ್ಥಿನಿ ಬದಲಿಗೆ ಪರೀಕ್ಷೆ ಬರೆದು ಈಕೆ ಬಂಧನವಾಗಿದ್ದಾರೆ. ಜಿಲ್ಲೆಯ ಮಿಲಿಂದ್ ಕಾಲೇಜಿನಲ್ಲಿ ಮಾ.5 ರಂದು ರಾಜ್ಯಶಾಸ್ತ್ರ ಪರೀಕ್ಷೆ ನಡೆದಿತ್ತು. ಅರ್ಚನಾ ಎಂಬ ವಿದ್ಯಾರ್ಥಿನಿ ಬದಲಿಗೆ ಕಾನೂನು ವಿದ್ಯಾರ್ಥಿನಿ/ಕಾಂಗ್ರೆಸ್ ಕಾರ್ಯಕರ್ತೆ ಸಂಪೂರ್ಣ ಪಾಟೀಲ್ ಎಂಬುವವರು ಪರೀಕ್ಷೆ ಬರೆದಿದ್ದಾರೆ ಎನ್ನಲಾಗಿದೆ.
ಕಾಲೇಜಿನಲ್ಲಿ ಈ ಕುರಿತು ಕಾರ್ಯಕರ್ತರ ಸಂಘಟನೆಯೊಂದು ಪ್ರಶ್ನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಿಲಿಂದ್ ಶಾಲೆಯ ಪ್ರಾಂಶುಪಾಲರು ಬ್ರಹ್ಮಪೂರ ಪೊಲೀಸ್ ಠಾಣೆಯ ಕೇಸ್ ದಾಖಲು ಮಾಡಲಾಗಿದೆ. ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.
Comments are closed.