D K Shivakumar: 2027ಕ್ಕೆ ಎತ್ತಿನಹೊಳೆ ಪೂರ್ಣ-ಡಿಸಿಎಂ ಡಿಕೆಶಿ ಮಾಹಿತಿ

Bangalore: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಉದ್ದೇಶಿತ ಎತ್ತಿನಹೊಳೆ ಯೋಜನೆ ಕಾಮಗಾರಿಗಳು 2027ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವರು ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.

ವಿಧಾನ ಜೆಡಿಎಸ್‌ನ ಸಭೆಯಲ್ಲಿ ವೆಂಕಟ ಶಿವಾರೆಡ್ಡಿ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಉತ್ತರಿಸಿದರು. ಯೋಜನೆಯಡಿ ಮೊದಲು ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗುತ್ತದೆ. ತುಮಕೂರು ಜಿಲ್ಲೆಯಲ್ಲಿ ಕೆರಗಳ ಭರ್ತಿ ಬಗ್ಗೆ ಆತಂಕ ಬೇಡವೆಂದು ಅಭಯ ನೀಡಿದರು. ಯೋಜನೆಯಡಿ 24 ಟಿಎಂಸಿ ನೀರು ಲಭ್ಯತೆ ಲೆಕ್ಕಾಚಾರ, 18 ಟಿಎಂಸಿ ಖಾತರಿಯಿದೆ. ಇದರಲ್ಲಿ ಕುಡಿಯುವ ನೀರು ಪೂರೈಕೆಗೆ 14 ಟಿಎಂಸಿ ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
Comments are closed.