America: ಬರೋಬ್ಬರಿ 7. 5 ಲಕ್ಷಕ್ಕೆ ಸೇಲ್ ಆದ ಅಂಡರ್‌ವೇರ್!! ಏನಿದರ ವಿಶೇಷತೆ? ಯಾರು ಇದನ್ನು ಉಪಯೋಗಿಸುತ್ತಿದ್ದರು?

America: ವಿಶೇಷ ವ್ಯಕ್ತಿಗಳು ಉಪಯೋಗಿಸಿರುವಂತಹ ಕೆಲವೊಂದು ವಸ್ತುಗಳು ಹರಾಜಿನಲ್ಲಿ ಬಾರಿ ಬೆಲೆಗೆ ಸೇಲ್ ಆಗುವಂಥಹ ಸಂದರ್ಭದಲ್ಲಿ ನಾವು ನೋಡಿದ್ದೇವೆ. ಅಂತೆಯೇ ಇದೀಗ ಅಚ್ಚರಿ ಎಂಬಂತೆ ಅಂಡರ್ವೇರ್ ಒಂದು ಬರಬರಿ 7.5 ಲಕ್ಷಕ್ಕೆ ಹರಾಜಿನಲ್ಲಿ ಸೇಲ್ ಆಗಿದೆ.

ಹೌದು, ಅಮೇರಿಕಾದಲ್ಲಿ ನಡೆದ ವಿಶಿಷ್ಟ ಹರಾಜಿನಲ್ಲಿ, ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ (ಜೆಎಫ್‌ಕೆ) ಧರಿಸಿದ್ದ ಒಳ ಉಡುಪು 7.5 ಲಕ್ಷ ರೂ.ಗೆ ಮಾರಾಟವಾಗಿದೆ. 1940 ರ ದಶಕದ ಈ ಒಳ ಉಡುಪುಗಳ ಮೇಲೆ ‘Jack’ ಎಂಬ ಕಸೂತಿ ಮಾಡಲಾಗಿದ್ದು, ಕೊನೆಗೆ ಇದು $9,100 ಡಾಲರ್ ಅಂದ್ರೆ ಸುಮಾರು ರೂ. 7.5 ಲಕ್ಷ ರೂ. ಗೆ ಮಾರಾಟವಾಗಿದೆ. ಈ ವಿಶಿಷ್ಟ ಹರಾಜಿನ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಅಷ್ಟೇ ಅಲ್ಲದೆ ಈ ಹರಾಜಿನಲ್ಲಿ ಫೇಸ್‌ಬುಕ್ ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ಗೆ ಸೇರಿದ ಹೂಡಿ ಮತ್ತು ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಬೋ ಟೈಯನ್ನು ಕೂಡಾ ಹರಾಜಿನಲ್ಲಿ ಇಡಲಾಗಿತ್ತು. ಇನ್ನೂ ಮಾರ್ಕ್ ಜುಕರ್‌ಬರ್ಗ್ ಹೂಡಿ ಬಟ್ಟೆ $15,875 (ಸುಮಾರು 13 ಲಕ್ಷ ರೂ.) ಗೆ ಮಾರಾಟವಾಗಿದೆ.
Comments are closed.