Lucknow: ಮದುವೆಯಾಗಿ 2 ದಿನದಲ್ಲೇ ಮಗು ಹೆತ್ತ ವಧು!

Share the Article

Lucknow: ಮದುವೆಯಾಗಿ ಕೇವಲ ಎರಡೇ ದಿನದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ತಂದೆ ಯಾರು ಎಂದು ಎರಡೂ ಕುಟುಂಬಸ್ಥರ ನಡುವೆ ವಾಗ್ಯುದ್ದಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಈ ಘಟನೆ ನಡೆದಿದೆ.

ಯುವಕ ಕುಟುಂಬದವರು ನಿಶ್ಚಯ ಮಾಡಿದ ವಧುವನ್ನೇ ಯುವಕ ಫೆ.24 ರಂದು ವಿವಾಹವಾಗಿದ್ದ. ಫೆ.26 ರಂದು ಪತ್ನಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಗ ಆಕೆ ಗರ್ಭಿಣಿ ಎಂದು ತಿಳಿದು ಬಂದಿದೆ. ಬಳಿಕ ಮಹಿಳೆ ಮಗುವಿನ ಜನ್ಮ ನೀಡಿದ್ದಾಳೆ. ಈ ಮಗುವಿನ ತಂದೆ ನಾನಲ್ಲ ಎಂದು ಯುವಕ ಹೇಳಿದ್ದು, ಹೆಣ್ಣಿನ ಕಡೆಯರು ಈಕೆ ಗರ್ಭಿಣಿ ಎಂದು ತಿಳಿದೇ ಮದುವೆ ಮಾಡಿಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಹೆಣ್ಣು ನೋಡುವ ಶಾಸ್ತ್ರದ ಬಳಿಕ ಆಕೆಯನ್ನು ಭೇಟಿಯಾಗಲು ಕುಟುಂಬಸ್ಥರು ಅವಕಾಶ ನೀಡದೇ ಮದುವೆ ಮಂಟಪದಲ್ಲಿ ಕೂಡಾ ಆಕೆ ಗರ್ಭಿಣಿ ಎಂದು ಗೊತ್ತಾಗದ ರೀತಿಯಲ್ಲಿ ದೊಡ್ಡ ಲೆಹಂಗಾ ಧರಿಸಿದ್ದಳು ಎಂದು ಪತಿ ಆರೋಪ ಮಾಡಿದ್ದಾನೆ.

Comments are closed.