Medicine: ತಮ್ಮಲ್ಲೇ ಔಷಧಗಳನ್ನು ಖರೀದಿಸುವಂತೆ ಖಾಸಗಿ ಆಸ್ಪತ್ರೆಗಳು ರೋಗಿಗಳ ಮೇಲೆ ಒತ್ತಡ ಹೇರುವಂತಿಲ್ಲ: ಸುಪ್ರೀಂ ಕೋರ್ಟ್

Medicine: ಕಡಿಮೆ ದರದಲ್ಲಿ ಬೇರೆಡೆ ಔಷಧಗಳು (Medicine) ಲಭ್ಯವಿರುವಾಗ ಅವುಗಳನ್ನು ತಮ್ಮಲ್ಲೇ ಹೆಚ್ಚಿನ ಬೆಲೆಗೆ ಖರೀದಿಸುವಂತೆ ಖಾಸಗಿ ಆಸ್ಪತ್ರೆಗಳು ರೋಗಿಗಳ ಮೇಲೆ ಒತ್ತಡ ಹೇರಬಾರದು ಜೊತೆಗೆ ರೋಗಿಗಳು ಹಾಗೂ ಅವರ ಕುಟುಂಬಸ್ಥರನ್ನು ಲೂಟಿ ಮಾಡದಂತೆ ಮಾರ್ಗಸೂಚಿ ಬಿಡುಗಡೆಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಹೌದು ಈ ಕುರಿತಂತೆ ಕಾನೂನು ವಿದ್ಯಾರ್ಥಿ ಸಿದ್ದಾರ್ಥ್ ದಾಲಿಯಾ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ತಮ್ಮಲ್ಲಿರುವ ಔಷಧಾಲಯಗಳಲ್ಲಿ ಔಷಧ ಖರೀದಿಸುವಂತೆ ಆಸ್ಪತ್ರೆಗಳು ಒತ್ತಡ ಹೇರಿ ರೋಗಿಗಳನ್ನು ಲೂಟಿ ಮಾಡಲಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ರಿಟ್ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆ ನಡೆಸಿದ ನ್ಯಾ| ಸೂರ್ಯಕಾಂತ್ ಹಾಗೂ ನ್ಯಾ| ಎನ್ ಕೆ ಸಿಂಗ್ ಅವರ ಪೀಠವು ಬಡವರ್ಗದ ಜನರಿಗೆ ಅಗತ್ಯ ವೈದ್ಯಕೀಯ ಮೂಲ ಸೌಕರ್ಯ ಸೇವೆ ಔಷದಗಳನ್ನು ಕೈಗೆಟುಕುವ ದರದಲ್ಲಿ ಒದಗಿಸಿಕೊಡುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿದ್ದು ಇದು ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ ಎಂಬುದನ್ನು ಗಮನಿಸಿದೆ.
ಸಂವಿಧಾನದ 21ನೇ ವಿಧಿ ಅನ್ವಯ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕರ ಹಕ್ಕಾಗಿದ್ದು ರಾಜ್ಯ ಸರ್ಕಾರಗಳು ಅದನ್ನು ಒದಗಿಸಬೇಕು. ಹೀಗಾಗಿ ನ್ಯಾಯಾಲಯವೇ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡುವುದು ಸಮಂಜಸವಲ್ಲ. ಬದಲಿಗೆ ಆಸ್ಪತ್ರೆಗಳು ರೋಗಿಗಳನ್ನು ಸುಲಿಗೆ ಮಾಡಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಮಾರ್ಗಸೂಚಿ ಕೈಗೊಳ್ಳಬೇಕು ಎಂದು ತಿಳಿಸಿದೆ.
Comments are closed.