Udupi: ಉಡುಪಿಯಲ್ಲಿ ರೋಚಕ ರೀತಿ ನಟೋರಿಯಸ್ ಕ್ರಿಮಿನಲ್ ಬಂಧನ!

Share the Article

Udupi: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಉಡುಪಿಯ ಮಣಿಪಾಲದಲ್ಲಿ ಗರುಡ ಗ್ಯಾಂಗ್ ನ ಕುಖ್ಯಾತ ಸದಸ್ಯ, ಸರಣಿ ಅಪಘಾತ ನಡೆಸಿದ, ಇಸಾಕ್ ನನ್ನು ಉಡುಪಿಯಲ್ಲಿ ನಟೋರಿಯಸ್ ಕ್ರಿಮಿನಲ್ ನ್ನು ಬಂಧಿಸಲಾಗಿದೆ.

ಹೌದು, ಸೀನಿಮಿಯ ರೀತಿಯಲ್ಲಿ ನಟೋರಿಯಸ್ ಕ್ರಿಮಿನಲ್ ನನ್ನ ಚೇಸ್ ಮಾಡಿ ಮಣಿಪಾಲ ಪೊಲೀಸರು ಸೆರೆ ಹಿಡಿದಿದ್ದಾರೆ. ಉಡುಪಿ (Udupi) ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಘಟನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯನ್ನ ಬಂಧಿಸಲು ನೆಲಮಂಗಲ ಪೊಲೀಸರು ಆಗಮಿಸಿದ್ದರು. ನೆಲಮಂಗಲ ಪೊಲೀಸರನ್ನು ಕಂಡು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದು ಆರೋಪಿಯನ್ನ ಬೆಂಬಿಡದೆ ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲ ಪೊಲೀಸರು ಬೆನ್ನಟ್ಟುವ ವೇಳೆ ನಾಲ್ಕು ಕಾರು ಹಾಗು ಒಂದು ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನ ನಡೆಸಿದ್ದಾನೆ ಎನ್ನಲಾಗಿದೆ.

Comments are closed.