Belthangady: ಎಲೆಚುಕ್ಕಿ ರೋಗದಿಂದ ರೈತರು ಕಣ್ಗೆಟ್ಟಿದ್ದಾರೆ: ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತಿದ ಕಿಶೋ‌ರ್ ಕುಮಾರ್ ಬೊಟ್ಯಾಡಿ

Share the Article

Belthangady: ರಾಜ್ಯದ ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದ ಮಂಗಳವಾರ ನಡೆದ ವಿಧಾನ ಪರಿಷತ್‌ ಕಲಾಪದಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಕಿಶೋ‌ರ್ ಕುಮಾ‌ರ್ ಬೊಟ್ಯಾಡಿ ಅವರು, ಎಲೆ ಚುಕ್ಕಿ ರೋಗದ ಕುರಿತು ಧ್ವನಿ ಎತ್ತಿ, ಎಲೆಚುಕ್ಕಿ ರೋಗದಲ್ಲಿ ಸುಳ್ಯ-ಪುತ್ತೂರು ಭಾಗದ ರೈತರು ಬೆಲೆ ನಾಶದಿಂದ ಕಣ್ಗೆಟ್ಟಿದ್ದಾರೆ. ರೋಗಕ್ಕೆ ಸಮರ್ಪಕವಾಗಿ ಮದ್ದುಗಳು ತೋಟಗಾರಿಕೆ ಇಲಾಖೆಯಲ್ಲಿ ಸಿಗುತ್ತಿಲ್ಲ. ಪೋಷಕಾಂಶಗಳನ್ನು ನೀಡುತ್ತಿಲ್ಲ. ಔಷಧಿಗಳ ಕೊರತೆಯಿದೆ, ಕೇಂದ್ರದಿಂದ ಅನುದಾನ ಬಂದರು ರೈತರ ಕೈಗೆ ಸೇರಿಲ್ಲ. ರಾಜ್ಯದಿಂದಲೂ ಅನುದಾನ ಶೀಘ್ರವಾಗಿ ಒದಗಿಸಬೇಕು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಪ್ರತಾಪ್ ಸಿಂಹ ನಾಯಕ್‌ ಧ್ವನಿಗೂಡಿಸಿದರು.

ಈ ಕುರಿತಾಗಿ ಕೇಂದ್ರದಿಂದ ಅನುದಾನ ಬಂದಿದ್ದು ರಾಜ್ಯದ ಅನುದಾನ ಜೋಡಿಕರಣ ಪ್ರಕ್ರಿಯೆ ಮಾಡಲಾಗುತ್ತಿದ್ದು ಶೀಘ್ರವೇ ನೀಡಲು ತಯಾರಿ ಮಾಡುತ್ತಿದ್ದೇವೆ. ಒಂದು ಹೇಕ್ವೆರ್‌ಗೆ 1,200 ರೂ. ನೀಡುತ್ತಿದ್ದು ಅದು ಕಡಿಮೆ ಆಗುತ್ತದೆ ಎಂದು ಕೇಂದ್ರಕ್ಕೆ ಹೆಚ್ಚುವರಿ ಮಾಡುವಂತೆ ಮನವಿ ಕಳುಹಿಸಲಾಗಿದೆ ಎಂದು ತೋಟಗಾರಿಕಾ ಇಲಾಖಾ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

Comments are closed.