Kalpana Raghavendra: ಖ್ಯಾತ ಗಾಯಕಿ ಕಲ್ಪನಾ ರಾಘವೇಂದ್ರ ಆತ್ಮಹತ್ಯೆಗೆ ಯತ್ನ!

Share the Article

Kalpana Raghavendra: ಗಾಯಕ ಟಿ.ಎಸ್.ರಾಘವೇಂದ್ರ ಮಗಳು ಖ್ಯಾತ ಗಾಯಕಿ ಕಲ್ಪನಾ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೈದರಾಬಾದ್‌ನಲ್ಲಿ ಅವರ ನಿವಾಸದಲ್ಲಿ ನಡೆದಿದೆ.

ಎರಡು ದಿನಗಳಿಂದ ತನ್ನ ಮನೆಯ ಬಾಗಿಲನ್ನು ತೆಗೆಯದೇ ಇದ್ದ ಕಾರಣ ಭದ್ರತಾ ಸಿಬ್ಬಂದಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ ಒಳಗೆ ಕಲ್ಪನಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

2010 ರಲ್ಲಿ ಕಲ್ಪನಾ ಮಲಯಾಳಂ ಸ್ಟಾರ್‌ ಸಿಂಗರ್‌ ರಿಯಾಲಿಟಿ ಶೋ ಗೆದ್ದಿದ್ದರು. ಹಲವಾರು ತೆಲುಗು, ತಮಿಳು, ಕನ್ನಡದ ಗೀತೆಗಳನ್ನು ಹಾಡಿ ಖ್ಯಾತಿ ಪಡೆದಿದ್ದಾರೆ. ಸುಮಾರು 1500 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಜನಪ್ರಿಯತೆಯನ್ನು ಗಳಿಸಿದ್ದ ಗಾಯಕಿ, ಆತ್ಮಹ್ಯತ್ಯೆಗೆ ಯತ್ನ ಮಾಡಿದ್ದೇಕೆ ಎಂದು ತಿಳಿದು ಬಂದಿಲ್ಲ.

Comments are closed.