Mangaluru: ಮಂಗಳೂರಿನ ಜೈಲಿನಲ್ಲಿ ಫುಡ್‌ ಫಾಯ್ಸನ್‌; 45 ಕೈದಿಗಳಿಗೆ ವಾಂತಿಭೇದಿ

Share the Article

Mangalore: ನಗರದಲ್ಲಿರುವ ಕಾರಾಗೃಹದ ಕೈದಿಗಳಿಗೆ ದಿಢೀರ್‌ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡ ಪರಿಣಾಮ ಕೈದಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಮಧ್ಯಾಹ್ನದ ಊಟ ಸೇವಿಸಿದ ನಂತರ ಈ ಘಟನೆ ನಡೆದಿದ್ದು, 45 ಮಂದಿಯನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಧ್ಯಾಹ್ನ ಅನ್ನ, ಸಾಂಬಾರ್‌ ಮತ್ತು ಬೆಳಗ್ಗೆ ಅವಲಕ್ಕಿಯನ್ನು ಕೈದಿಗಳಿಗೆ ನೀಡಲಾಗಿದೆ ಎನ್ನಲಾಗಿದೆ. ಆದರೆ ಮಧ್ಯಾಹ್ನದ ಊಟದ ನಂತರ ವಾಂತಿ ಭೇದಿ ಉಂಟಾಗಿದ್ದು, ನಂತರ ಅನಾರೋಗ್ಯ ಕಾಣಿಸಿಕೊಂಡ ಕೈದಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಜೆ 3.30 ರಿಂದ 4.30 ರ ನಡುವೆ ನಾಲ್ಕು ಪೊಲೀಸ್‌ ಬಸ್ಸಿನಲ್ಲಿ ಕೈದಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರ ಇರುವ ಕುರಿತು ವರದಿಯಾಗಿದೆ.

ವೈದ್ಯರ ಜೊತೆ ಕೈದಿಗಳ ಆರೋಗ್ಯದ ಕುರಿತು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ವಿಚಾರಿಸಿದ್ದಾರೆ. ಬಿಗಿ ಭದ್ರತೆಯಲ್ಲಿ ಚಿಕಿತ್ಸೆಯನ್ನು ಕೈದಿಗಳಿಗೆ ನೀಡಲಾಗುತ್ತಿದೆ. ಆಹಾರದ ಸ್ಯಾಂಪನ್ನು ಪರೀಕ್ಷೆಗೆ ಕಳುಹಿಸಿಲಾಗಿದೆ, ಯಾವ ಕಾರಣದಿಂದ ಫುಡ್‌ ಪಾಯ್ಸನ್‌ ಆಗಿದೆ ಎನ್ನುವ ತನಿಖೆ ನಡೆಸಲಾಗುವುದು. 45  ಮಂದಿಯ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಮಿಷನರ್‌ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

Comments are closed.