Chikkaballapura: ಪ್ರಿಯಕರ ಮನೆಗೆ ಬರದಿದ್ದಕ್ಕೆ ಮಹಿಳೆ ಆತ್ಮಹತ್ಯೆ?

Share the Article

Chikkaballapura: ಮನೆಯಲ್ಲಿ ಗಂಡ ಇಲ್ಲದ ಸಮಯದಲ್ಲಿ ವಿನುತ ಎಂಬ ಮಹಿಳೆ ಬೆಡ್‌ರೂಂ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತಳ ತಂದೆ ತಾಯಿ, ಗಂಡ ಸತೀಶ್‌ ಮತ್ತು ಆಕೆಯ ಪ್ರಿಯಕರ ಬಾಲರಾಜು ಮೇಲೆ ಅನುಮಾನ ವ್ಯಕ್ತಪಡಿಸಿ ದೂರನ್ನು ನೀಡಿದ್ದಾರೆ.

ವಿನುತಾ ಮದುವೆಯಾಗಿ ಒಂದು ಮಗುವಿನ ತಾಯಿಯಾಗಿದ್ದರೂ ಗ್ರಾಮದ ಯುವಕನೋರ್ವನ ಜೊತೆ ಅನೈತಕ ಸಂಬಂಧವಿಟ್ಟುಕೊಂಡಿದ್ದಳು ಎಂದು ವರದಿಯಾಗಿದೆ. ಫೆ.28 ರಂದು ರಾತ್ರಿ ವಿನುತ ತನ್ನ ಪ್ರಿಯಕರ ಬಾಲರಾಜುಗೆ ಕರೆ ಮಾಡಿದ್ದಾಳೆ. ಮನೆಗೆ ಬರಲು ಹೇಳಿದ್ದಾಳೆ. ಆದರೆ ಬಾಲಕರಾಜುಗೆ ಸಕಾಲಕ್ಕೆ ವಿನುತಾ ಮನೆಗೆ ಹೋಗಲು ಆಗಿಲ್ಲ. ಇದರಿಂದ ಮನನೊಂದ ವಿನುತಾ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಮೃತಳ ಸ್ವಂತ ಮಗ ಪೊಲೀಸರಿಗೆ ತಾಯಿ ನೇಣು ಬಿಗಿದುಕೊಂಡಿರುವ ಕುರಿತು ತಿಳಿಸಿದ್ದಾನೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ಮಾಡುತ್ತಿದ್ದಾರೆ.

Comments are closed.