Bantwala: ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆಗೆ ಯತ್ನ: ಯುವಕರಿಂದ ರಕ್ಷಣೆ

Bantwala: ಮಂಗಳವಾರ ಮಾ. 4 ರಂದು ಬೆಳಿಗ್ಗೆ ಬೆಂಗಳೂರು ನಿವಾಸಿ ಶಂಕರಯ್ಯ (50) ಅವರು ಪಾಣೆಮಂಗಳೂರಿನ ನೇತ್ರಾವತಿ (Bantwala) ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳೀಯ ಮುಸ್ಲಿಂ ಯುವಕನೊಬ್ಬ ಆತನನ್ನು ರಕ್ಷಿಸಲು ಧಾವಿಸಿ ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ.
ಶಂಕರಯ್ಯ ಅವರು ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತ ಅವರು ಬೆಂಗಳೂರಿನಿಂದ ಮಂಗಳೂರಿಗೆ ನೇರವಾಗಿ ಪ್ರಯಾಣ ಬೆಳೆಸಿ ಪಾಣೆಮಂಗಳೂರಿನ ಹೊಸ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ವರದಿ ಆಗಿದೆ.
ನೀರಿನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಗಮನಿಸಿದ ಗೂನಿದಬಲಿಯ ಎಂ ಕೆ ರಸ್ತೆಯ ನಿವಾಸಿ ಸಿದ್ದಿಕ್ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಉಪವಾಸವಿದ್ದರೂ ಹಿಂಜರಿಕೆಯಿಲ್ಲದೆ ನದಿಗೆ ಹಾರಿ ಟ್ಯೂಬ್ ಬಳಸಿ ಮುಳುಗುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ್ದಾರೆ. ನಂತರ ಶಂಕರಯ್ಯ ಅವರನ್ನು ಬಂಟ್ವಾಳ ಪಟ್ಟಣ ಪೊಲೀಸರಿಗೆ ಹಸ್ತಾಂತರಿಸಲಾಯಿತು.
Comments are closed.