Ranya: ತೊಡೆಗೆ ಚಿನ್ನದ ಬಿಸ್ಕೆಟ್ ಅಂಟಿಸಿಕೊಂಡು ಬರುತ್ತಿದ್ದ ನಟಿ ರನ್ಯಾ!!

Share the Article

Ranya: ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದಡಿ ಕನ್ನಡದ ಖ್ಯಾತ ನಟಿ ರನ್ಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ವಿಚಾರಣೆ ಬಳಿಕ ಪೊಲೀಸರು ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

ಈ ಕುರಿತಾಗಿ ಮಾಹಿತಿ ನೀಡಿದ ಪೊಲೀಸರು ನಟಿ ರನ್ಯಾ ತೊಡೆಯ ಭಾಗಕ್ಕೆ 14 ಬಿಸ್ಕೆಟ್‌ಗಳನ್ನು ಗಮ್ ಹಾಕಿ ಅಂಟಿಸಿಕೊಂಡಿದ್ದರು. ಬಳಿಕ ಟೇಪ್ ಅನ್ನು ಬಲವಾಗಿ ಸುತ್ತಿಕೊಂಡಿದ್ದರು. ಟೇಪ್ ಮೇಲೆ ಕ್ರೆಪೆ ಬ್ಯಾಂಡೇಜ್ ಸುತ್ತಿಕೊಂಡಿದ್ದರು. ಯಾವುದೇ ಸ್ಕ್ಯಾನರ್ ಅಲ್ಲಿ ಅನುಮಾನ ಬಾರದಂತೆ ಕ್ರೆಪೆ ಬ್ಯಾಂಡೇಜ್ ಹಾಕಿಕೊಂಡಿದ್ದರು. ಇದೆಲ್ಲಾ ಮಾಹಿತಿ ತಿಳಿದಿದ್ದ ಡಿಆರ್‌ಐ ಕಾರ್ಯಾಚರಣೆ ನಡೆಸಿತು ಎಂದು ತಿಳಿಸಿದ್ದಾರೆ.

ಅಲ್ಲದೆ ಒಟ್ಟು 17.29 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ಏರ್‌ಪೋರ್ಟ್ನಲ್ಲಿ 12.56 ಕೋಟಿ ಮೌಲ್ಯದ 14.2 ಕೆಜಿ ಚಿನ್ನ, ಮನೆಯಲ್ಲಿ 2.06 ಕೋಟಿ ಮೌಲ್ಯದ ಚಿನ್ನ, ಬೆಂಗಳೂರಿನ ಮನೆಯಲ್ಲಿ 2.67 ಕೋಟಿ ನಗದು ಹಣ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.

Comments are closed.