Ujire: ಉಜಿರೆ: ಉಜಿರೆಯ ಅನುಗ್ರಹ ಶಾಲೆಗೆ ನುಗ್ಗಿದ ಕಳ್ಳರು!

Ujire: ಉಜಿರೆ (Ujire) ಗ್ರಾಮದ ಅನುಗ್ರಹ ಶಾಲೆಗೆ ಮಾ. 4ರಂದು ಬೆಳಗ್ಗಿನ ಜಾವ ಸರಿಸುಮಾರು 5 ಗಂಟೆಯ ಹೊತ್ತಿಗೆ ಕಳ್ಳರು ನುಗ್ಗಿರುವ ಘಟನೆ ನಡೆದಿದೆ.

ಬೆಳಗ್ಗೆ ಶಾಲಾ ಮುಖ್ಯೋಪಾಧ್ಯಾಯರು ಭೇಟಿ ನೀಡಿದ ಸಂಧರ್ಭದಲ್ಲಿ 2 ಕೊಠಡಿಯ ಬಾಗಿಲು ತೆರೆದುಕೊಂಡಿತು. ಪಿಯುಸಿ ಪರೀಕ್ಷೆ ನಡೆಯುವ ಸಂದರ್ಭ ಆಗಿರುವುದರಿಂದ ಘಟನೆಯಿಂದ ಅನುಮಾನ ಉಂಟಾಗಿದೆ. ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ಹಾರ್ಡ್ ಡಿಸ್ಕ್ ತೆಗೆದುಕೊಂಡು ಹೋಗಿರುವ ಕಳ್ಳರು. ಬೆಳ್ತಂಗಡಿ ಪೊಲೀಸರಿಂದ ತನಿಖೆ ಆರಂಭ, ಶ್ವಾನ ದಳ ಬಳಸಿ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
Comments are closed.