Udupi: ಉಡುಪಿಯ ಪ್ರಸಿದ್ಧ ಪಾಕತಜ್ಞ ನಾಗರಾಜ ಭಟ್ ನಿಧನ

Share the Article

Udupi: ಉಡುಪಿ (Udupi) ಯ ಖ್ಯಾತ ಪಾಕತಜ್ಞ ನಾಗರಾಜ ಭಟ್ (48) ಅವರು ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸಂಜೆ ನಿಧನರಾದರು. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

‘ಪುಟ್ಟಣ್ಣ’ ಎಂದು ಆತ್ಮೀಯರಿಂದ ಪರಿಚಿತರಾಗಿದ್ದ ನಾಗರಾಜ ಭಟ್, ಉಡುಪಿ ಶೈಲಿಯ ಶುದ್ಧ ಮತ್ತು ರುಚಿಯಾದ ಅಡುಗೆ ತಯಾರಿಯಲ್ಲಿ ಎತ್ತಿದ ಕೈ.

ನಾಗರಾಜ ಭಟ್ ಅವರ ಅಗಲಿಕೆಗೆ ಉಡುಪಿ ಅಡುಗೆಯವರ ಸಂಘ, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿವೆ.

Comments are closed.