Raichur : ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯಲ್ಲಿ ಲೀಕ್?

Raichur : ಪರೀಕ್ಷೆ ಶುರುವಾಗಿ ಕೇವಲ ಒಂದು ಗಂಟೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವಾ ಘಟನೆ ರಾಯಚೂರಿನ ಲಿಂಗಸೂರಿನಲ್ಲಿ ಬೆಳಕಿಗೆ ಬಂದಿದೆ.
ಲಿಂಗಸುಗೂರು ತಾಲೂಕಿನಲ್ಲಿ ಹಲವು ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ದ್ವಿತೀಯ ಪಿಯುಸಿ ಪರೀಕ್ಷೆಯ ಹಿನ್ನಲೆ ಸೋಮವಾರ ನಿಗದಿಯಾಗಿದ್ದ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಎಕ್ಸಾಂ ಶುರುವಾದ ಒಂದು ಗಂಟೆಯಲ್ಲೇ ಉತ್ತರದ ಜೊತೆಗೆ ಲೀಕ್ ಆಗಿದ್ದು, ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಪರೀಕ್ಷಾ ಮಂಡಳಿಗೆ ಒತ್ತಾಯಿಸಲಾಗಿದೆ.
ಪರೀಕ್ಷೆ ಶುರುವಾದ ಒಂದು ಗಂಟೆಯಲ್ಲಿ ಲಿಂಗಸುಗೂರಿನಲ್ಲಿ ವಿದ್ಯಾರ್ಥಿಗಳ ವಾಟ್ಸಪ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಶ್ನೆ ಪತ್ರಿಕೆಯ ಮೂರು ಪ್ರಶ್ನೆಗೆ ನಿಖರವಾಗಿ ಪ್ರಶ್ನೆ ಪತ್ರಿಕೆಯಲ್ಲೇ ಉತ್ತರವನ್ನು ಬರೆಯಲಾಗಿದ್ದು, ವೈರಲ್ ಅದ ಪತ್ರಿಕೆಯನ್ನು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ವೈರಲ್ ಆಗಿರುವ ಪ್ರಶ್ನೆ ಪತ್ರಿಕೆ ಕಂಡು ಪೋಷಕರು ಕೂಡ ಶಾಕ್ ಆಗಿದ್ದು, ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ.
ಅಲ್ಲದೆ ಮರು ಪರೀಕ್ಷೆಯ ಕೂಗು ಕೂಡ ಕೇಳಿ ಬಂದಿದೆ. ಇನ್ನು ತನಿಖೆಯ ಬಳಿಕವಷ್ಟೇ ಪ್ರಶ್ನೆ ಪತ್ರಿಕೆ ಯಾವ ವರ್ಷದ್ದು, ಯಾರು ವೈರಲ್ ಮಾಡಿದ್ದು ಎಂದು ತಿಳಿದು ಬರಲಿದೆ.

Comments are closed.