Guruvayanakere: ಗುರುವಾಯನಕೆರೆ: ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ


Guruvayanakere: ವಿಕಾಸ ವಿವಿಧ ಉದ್ದೇಶ ಸಹಕಾರ ಸಂಘ ಗುರುವಾಯನಕೆರೆಯಲ್ಲಿ (Guruvayanakere) ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ನೇತ್ರ ಆಸ್ಪತ್ರೆ ಮಂಗಳೂರು, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಮಂಗಳೂರು ಡಾ. ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್, ಸೆಂಚೂರಿ ಗ್ರೂಪ್, ಬೆಂಗಳೂರು ಇವರುಗಳ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಮಾ.3ರಂದು ವಿಕಾಸ ಸದನ, ಸಭಾಭವನ ಗುರುವಾಯನಕೆರೆಯಲ್ಲಿ ನಡೆಯಿತು.

ಶಿಬಿರದ ವಿಶೇಷತೆ ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು. ಅಗತ್ಯವುಳ್ಳವರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ರಿಯಾಯಿತಿ ದರದಲ್ಲಿ ಕನ್ನಡಕ ವಿತರಣೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ಮಂಗಳೂರು ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ವಾಹನದಲ್ಲಿ ಕರೆದುಕೊಂಡು ಹೋಗಿ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿ, ವಾಪಾಸು ಕರೆದು ತಂದು ಬಿಡಲಾಗುವುದು ಎಂದು ತಿಳಿಸಿದ್ದಾರೆ
ಶಿಬಿರವನ್ನು ಪ್ರಸಾದ್ ನೇತ್ರಾಲಯದ ವೈದ್ಯ ಡಾ. ವಿಷ್ಣುರವರು ಉದ್ಘಾಟಿಸಿದರು. ವಿಕಾಸ ವಿವಿಧೋದ್ದೇಶ ಸಹಾರಿ ಸಂಘದ ಅಧ್ಯಕ್ಷ ಅಲೋಶಿಯಸ್ ಡಿಸೋಜಾ ಆದ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿತಾ ಫೆರ್ನಾಂಡೀಸ್, ಉಪದ್ಯಕ್ಷ ಯೋಗೇಶ್ ಪೈ, ಪ್ರಸಾದ್ ನೇತ್ರಲಯದ ಸಂಪರ್ಕಾಧಿಕಾರಿ ಸೈಯದ್, ನಿರ್ದೇಶಕರಾದ ಶೇಖರ್ ನಾಯ್, ರಾಘವ ಶೆಟ್ಟಿ ಕೆ., ಮಮತಾ ಶೆಟ್ಟಿ, ದಿನೇಶ್ ನಾಯ್ಡ್ ಮೋಹನ್ ಹೆಗ್ಡೆ, ಪ್ರವೀಣ್ ಚಂದ್ರ ಮೆಹಂದಲೇ, ಪ್ರೆಮಾವತಿ ಭಟ್, ಸಂಘದ ಸಿಬಂದಿ ವರ್ಗ ಉಪಸ್ಥಿತರಿದ್ದರು.

Comments are closed.