Sullia: ಸುಳ್ಯ: ಅಪರಿಚಿತ ವ್ಯಕ್ತಿಯಿಂದ ಕತ್ತಿ ಹಿಡಿದು ಅಂಗಡಿ ಮಾಲಕರಿಗೆ ಬೆದರಿಕೆ!

Sullia: ಅಪರಿಚಿತ ವ್ಯಕ್ತಿಯೋರ್ವ ಸುಳ್ಯ (Sullia) ಪೇಟೆಯಲ್ಲಿ ಕತ್ತಿಯನ್ನು ಹಿಡಿದು ಅಂಗಡಿಯ ಮುಂಭಾಗಕ್ಕೆ ಬಂದು ಮಾಲಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮತ್ತು ಬೆದರಿಸುವ ಕೃತ್ಯ ಮಾಡುತ್ತಿದ್ದು ಈ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂಗಡಿಯ ಮಾಲಕರುಗಳು ಸುಳ್ಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಆದರೆ ಪೊಲೀಸರಿಂದ ಯಾವುದೇ ರೀತಿಯ ಸ್ಪಂದನೆ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ವ್ಯಕ್ತಿಯ ಚಲನ ವಲನ ನೋಡಿದರೆ ಮಾನಸಿಕ ವ್ಯಕ್ತಿಯಂತೆ ಕಂಡು ಬರುತ್ತದೆ ಎನ್ನಲಾಗುತ್ತಿದೆ.
Comments are closed.