Ranya Rao: ವಿಮಾನದಲ್ಲಿ ಅಕ್ರಮ ಚಿನ್ನ ಸಾಗಾಟ ಆರೋಪ- ಕನ್ನಡದ ಖ್ಯಾತ ನಟಿ ಹರೆಸ್ಟ್

Share the Article

Ranya Rao: ಅಕ್ರಮ ಚಿನ್ನ ಸಾಗಾಟ ಆರೋಪದಲ್ಲಿ ಕನ್ನಡದ ನಟಿ ರನ್ಯಾ ರಾವ್(Ranya Rao) ಅವರನ್ನು​ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ರನ್ಯಾ ದುಬೈನಿಂದ ಬೆಂಗಳೂರಿಗೆ ಮಾರ್ಚ್ 3ರ ರಾತ್ರಿ ಮರಳಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಏರ್​ಪೋರ್ಟ್​ ಕಸ್ಟಮ್ಸ್​ನ ಡಿಆರ್​ಐ ಅಧಿಕಾರಿಗಳು ರನ್ಯಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದ ಆರೋಪ ರನ್ಯಾ ಮೇಲೆ ಇದೆ.

ಇವರು 2014ರಲ್ಲಿ ಸುದೀಪ್ ನಟನೆಯ ‘ಮಾಣಿಕ್ಯ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಚಿತ್ರದಲ್ಲಿ ಮಾನಸಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡರು. 2016ರಲ್ಲಿ ತಮಿಳಿನ ಸಿನಿಮಾ ಒಂದನ್ನು ಮಾಡಿದ್ದಾರೆ. 2017ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಪಟಾಕಿ’ ಸಿನಿಮಾದಲ್ಲಿ ಸಂಗೀತಾ ಹೆಸರಿನ ಪಾತ್ರ ಮಾಡಿದ್ದಾರೆ.

Comments are closed.