Tamilunadu: ಮೃತ ತಾಯಿಗೆ ವಂದಿಸಿ ಪರೀಕ್ಷೆ ಬರೆಯಲು ಹೊರಟ 2nd ಪಿಯು ವಿದ್ಯಾರ್ಥಿ

Tamilunadu: ದ್ವಿತೀಯ ಪಿಯುಸಿ ವಿದ್ಯಾರ್ಥಿ ಒಬ್ಬ ಪರೀಕ್ಷೆಗೆ ಹಾಜರಾಗಲು ತಯಾರಿ ನಡೆಸುತ್ತಿದ್ದಂತಹ ಸಂದರ್ಭದಲ್ಲಿ ಆತನ ತಾಯಿ ಹಠತ್ತಾಗಿ ಮೃತಪಟ್ಟಿದ್ದಾರೆ. ಇಂತಹ ದುಃಖದ ಸಂದರ್ಭದಲ್ಲಿಯೂ ಆ ವಿದ್ಯಾರ್ಥಿಯು ತಾಯಿಯ ಪಾರ್ಥಿವ ಶರೀರಕ್ಕೆ ಕೈಮುಗಿದು ಹೊಂದಿಸಿ ಪರೀಕ್ಷೆ ಬರೆಯಲು ತೆರಳಿದಂತಹ ಮನ ಮಿಡಿಯುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಿರುನಲ್ವೇಲಿ ಜಿಲ್ಲೆಯ ವಲಿಯೂರಿನ ವಿದ್ಯಾರ್ಥಿ ಸುನೀಲ್ ಕುಮಾರ್ ಅವರ ತಂದೆ ಕೃಷ್ಣಮೂರ್ತಿ ಆರು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ತಾಯಿಯ ಆಸರೆಯಲ್ಲೇ ಮಗ ಬೆಳೆಯುತ್ತಿದ್ದ. ಆದರೆ ವಿಧಿಯಾಟ ಬಲ್ಲವರ್ಯಾರು ಎಂಬಂತೆ ಸುನಿಲ್ ಕುಮಾರ್ 12ನೇ ತರಗತಿಯ ಪಬ್ಲಿಕ್ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿರುವ ವೇಳೆ ಆತನ ತಾಯಿ ಸುಬ್ಬಲಕ್ಷ್ಮೀ ಮಾರ್ಚ್ 3ರ ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಇದರಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದರೂ, ಸುನಿಲ್‌ನ ಸಂಬಂಧಿಕರು ಮತ್ತು ನೆರೆಹೊರೆಯವರು ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು, ತನ್ನ ಮಕ್ಕಳಿಗೆ ಶಿಕ್ಷಣ ನೀಡುವ ತಾಯಿಯ ದೃಢಸಂಕಲ್ಪವನ್ನು ನೆನಪಿಸಿಕೊಂಡರು. ಹೊರಡುವ ಮೊದಲು, ಭಾವುಕರಾದ ಸುನಿಲ್ ತನ್ನ ಹಾಲ್ ಟಿಕೆಟ್ ಅನ್ನು ತನ್ನ ತಾಯಿಯ ಪಾದಗಳ ಬಳಿ ಇಟ್ಟು ಕಣ್ಣೀರು ಸುರಿಸುತ್ತಾ ಅಳಲು ಪ್ರಾರಂಭಿಸಿದ್ದ. ಕೊನೆಗೆ ಆತನನ್ನು ಸಂಬಂಧಿಕರೆಲ್ಲರೂ ಸಂಭಾಳಿಸಿ ತನ್ನ ತಾಯಿಯ ಆಸೆಯನ್ನು ನೆರವೇರಿಸಬೇಕು ಎಂದು ಅಂಗಲಾಚಿ ಯುವಕನ ಮನ ಪರಿವರ್ತಿಸಿ ಪರೀಕ್ಷೆ ಬರೆಯಲು ಕರೆದುಕೊಂಡು ಹೋಗಿದ್ದಾರೆ.
Comments are closed.