Rohtak: ಸೂಟ್‌ಕೇಸ್‌ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತೆಯ ಶವ ಪತ್ತೆ ಪ್ರಕರಣ; ಆರೋಪಿಯ ಬಂಧನ

Share the Article

Rohtak: ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತೆಯೊಬ್ಬರ ಹೆಣವು ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಘಟನೆ ಹರಿಯಾಣದ ರೋಹ್ಟಕ್‌ನಲ್ಲಿ ನಡೆದಿತ್ತು. ಹಿಮಾನಿ ನರ್ವಾಲ್‌ (22ವರ್ಷ) ಅವರ ಹೆಣವನ್ನಿರಿಸಿ ಸೂಟ್‌ಕೇಸ್‌ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿರುವ ಘಟನೆಗೆ ಸಂಬಂಧಪಟ್ಟಂತೆ ಇದೀಗ ಓರ್ವ ಆರೋಪಿಯ ಬಂಧನವಾಗಿದೆ.

ತಮ್ಮ ಮಗಳ ಸಾವಿಗೆ ಸಹ ಕಾಂಗ್ರೆಸ್‌ ಕಾರ್ಯಕರ್ತರೇ ಕಾರಣ ಎಂದು ಹಿಮಾನಿಯ ತಾಯಿ ಆರೋಪ ಮಾಡಿದ್ದಾರೆ. ನನ್ನ ಮಗಳು ಕಾಂಗ್ರೆಸ್‌ಗಾಗಿ ಬಹಳ ತ್ಯಾಗ ಮಾಡಿದ್ದಳು. ಪಕ್ಷದ ಸದಸ್ಯರು ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ಅವಳ ಏಳಿಗೆ ಕಂಡು ಬೆದರಿಕೆಗೆ ಒಳಗಾಗಿರಬಹುದು. ಅವರು ಈ ಕೊಲೆಯಲ್ಲಿ ಭಾಗಿಯಾಗಿರಬಹುದು ಎಂದು ತಾಯಿ ಸವಿತಾ ಇಂಡಿಯಾ ಟುಡೇಗೆ ಹೇಳಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತೆಯ ಸಾವಿನ ಕುರಿತು ಕಾಂಗ್ರೆಸ್‌ ತನಿಖೆಗೆ ಆಗ್ರಹ ಮಾಡಿದೆ. ಮೃತ ಹಿಮಾನಿ ನರ್ವಾಲ್‌ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಸಂಪ್ಲಾ ಬಸ್‌ ನಿಲ್ದಾಣದ ಬಳಿ ಸೂಟ್‌ಕೇಸ್‌ ಪತ್ತೆಯಾಗಿದ್ದು, ನಾಗರಿಕರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಬಂದಾಗ ಹಿಮಾನಿ ನರ್ವಾಲ್‌ ಮೃತದೇಹ ಸೂಟ್‌ಕೇಸ್‌ನೊಳಗೆ ಇತ್ತು.

ರೋಹ್ಟಕ್‌ನ ವಿಜಯ ನಗರ ನಿವಾಸಿಯಾದ ಹಿಮಾನಿ ಅವರ ಕುತ್ತಿಗೆಯನ್ನು ದುಪಟ್ಟದಿಂದ ಬಿಗಿಯಲಾಗಿತ್ತು. ಕೈಗೆ ಮೆಹಂದಿ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

Comments are closed.