Karkala: ಕಾರ್ಕಳ: ನಾಗರ ಹಾವು ಹಾವು ಕಚ್ಚಿ ಮೃತ್ಯು

Karkala: ಕಾರ್ಕಳ (Karkala) ಪರಪಾಡಿ, ನಲ್ಲೂರು ಗ್ರಾಮ ನಿವಾಸಿ ಸಂತೋಷ (32)ರವರು ಮನೆಯ ಹತ್ತಿರ ಕೃಷಿ ಕೆಲಸ ಮಾಡಿಕೊಂಡಿರುವ ಸಮಯದಲ್ಲಿ ಅವರ ಎಡಕಾಲಿಗೆ ನಾಗರಹಾವು ಕಚ್ಚಿರುತ್ತದೆ.
ಕೂಡಲೇ ಅವರ ತಾಯಿ ಮತ್ತು ಸಂಬಂಧಿಕರು ಚಿಕಿತ್ಸ ಗಾಗಿ ಕಾರ್ಕಳದ ಡಾ. ಟಿಎಂಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಆದರೆ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಅಲ್ಲಿಂದ ಚಿಕಿತ್ಸೆಗಾಗಿ ಪುನಃ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದ ಸಂತೋಷರವರು ಚಿಕಿತ್ಸೆಗೆ ಸ್ಪಂದಿಸದೇ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Comments are closed.