AITUC: ಈ 2 ದಿನ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಊಟ ಸಿಗುವುದು ಡೌಟ್ !!

AITUC: ಸರ್ಕಾರವು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂಬುದಾಗಿ ಆಶ ಕಾರ್ಯಕರ್ತೆಯರು ಶಿಕ್ಷಕರು ಪ್ರಾಧ್ಯಾಪಕರು ಸರ್ಕಾರಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಂತಹ ಘಟನೆಗಳನ್ನು ನಾವು ಇದುವರೆಗೂ ಕಂಡಿದ್ದೇವೆ. ಈ ಬೆನ್ನಲ್ಲೇ ಇದೀಗ ಬಿಸಿ ಊಟ ತಯಾರಕರು ಕೂಡ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎರಡು ದಿನ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಊಟ ಸಿಗುವುದು ಡೌಟ್ ಎನ್ನಲಾಗಿದೆ.

ಹೌದು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (AITUC) ವತಿಯಿಂದ ರಾಜ್ಯಾದ್ಯಂತ ಬಿಸಿಯೂಟ ತಯಾರಿ ಕರ್ತವ್ಯ ನಿಲ್ಲಿಸಿ ಧರಣಿ ನಡೆಸಲು ಕರೆ ನೀಡಲಾಗಿದೆ. ರಾಜ್ಯಾದ್ಯಂತ ಅಕ್ಷರದಾಸೋಹ ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನಲ್ಲಿ ಮಾ.4 ಮತ್ತು 5ರಂದು ನಡೆಯಲಿರುವ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಆ ಎರಡು ದಿನ ಮಕ್ಕಳಿಗೆ ಬಿಸಿಯೂಟ ಸಿಗುವುದು ಸಂಪೂರ್ಣ ಅನುಮಾನವಾಗಿದೆ.
ಈ ಕುರಿತಾಗಿ ಸುದ್ದಿಗೋಷ್ಠಿಯ ಈ ಕುರಿತು ಮಾಹಿತಿ ನೀಡಿದ AITUC ನ ರಾಜ್ಯ ಉಪಾಧ್ಯಕ್ಷ ಪ್ರಭುದೇವ ಯಳಸಂಗಿ ಅವರು, ಬಿಸಿಯೂಟ ತಯಾರಕರಿಗೆ ಸರ್ಕಾರ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿರುವ ಪ್ರಕಾರ 6ನೇ ಗ್ಯಾರಂಟಿ ಜಾರಿಗೊಳಿಸುವಂತೆ ಮತ್ತು ಕೆಲಸ ಖಾಯಂಗೊಳಿಸುವಂತೆ ಹಾಗೂ ಬಿಸಿಯೂಟ ಯೋಜನೆ ಎನ್ನುವದುನ್ನು ಕೈಬಿಟ್ಟು ಅದರಲ್ಲಿ ಕೆಲಸ ಮಾಡುವವರನ್ನು ಖಾಯಂ ಕಾರ್ಮಿಕರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದರು.
ಬಿಸಿ ಊಟ ತಯಾರಕರ ಡಿಮ್ಯಾಂಡ್ ಏನು?
ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆಯವರಿಗೆ ರೂ.3,700 ಹಾಗೂ ಸಹಾಯಕ ಅಡುಗೆಯವರಿಗೆ ಕೇವಲ ರೂ.3,600 ಮಾಸಿಕ ನೀಡಲಾಗುತ್ತಿರುವ ಗೌರವ ಸಂಭಾವನೆಯನ್ನು ಹೆಚ್ಚಿಸಬೇಕು. ಕನಿಷ್ಠ ರೂ.16 ಸಾವಿರ ವೇತನ ಜಾರಿಗೊಳಿಸಬೇಕು. ಮರಣ ಪರಿಹಾರ ರೂ.10 ಲಕ್ಷ, ಪಿಎಫ್, ಎಎಸ್ಐ ಸೌಲಭ್ಯ, ಗ್ರಾಚ್ಯುಟಿ ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳು
Comments are closed.