Heart Attack: ಕಾರಿನಲ್ಲಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

Heart Attack: ಹೃದಯಾಘಾತದಿಂದ ಕಾರಿನಲ್ಲಿಯೇ ವ್ಯಕ್ತಿಯೋರ್ವರು ಸಾವಿಗೀಡಾಗಿರುವ ಘಟನೆ ಕೊಡಿಗೆಹಳ್ಳಿ ಬ್ರಿಡ್ಜ್ ಬಳಿ ನಡೆದಿದೆ.

ಮುತ್ಯಾಲ ನಗರದ ನಿವಾಸಿ ಅಶ್ವಿನ್ ಕುಮಾರ್ (47) ಮೃತ ವ್ಯಕ್ತಿ. ಮನೆಯಿಂದ ಹೊರಹೋಗಿದ್ದ ಅಶ್ವಿನ್ ಅವರು ತುಂಬಾ ಹೊತ್ತಾದರೂ ಮನೆಗೆ ವಾಪಾಸು ಬಂದಿರಲಿಲ್ಲ. ಹೀಗಾಗಿ ಕುಟುಂಬದ ಮಂದಿ ಪೊಲೀಸರಿಗೆ ದೂರನ್ನು ನೀಡಿದ್ದರು. ಲೊಕೇಷನ್ ಟ್ರ್ಯಾಕ್ ಮಾಡಿದಾಗ ಕಾರು ಇರುವ ಸ್ಥಳಕ್ಕೆ ಬಂದು ಕಾರಿನ ಬಾಗಿಲು ತೆಗೆದು ನೋಡಿದಾಗ ಅಶ್ವಿನ್ ಶವವಾಗಿ ಪತ್ತೆಯಾಗಿದ್ದಾರೆ.
ಕೊಡಿಗೆಹಳ್ಳಿ ಬ್ರಿಡ್ಜ್ ಬಳಿ ಖಾಸಗಿ ಆಸ್ಪತ್ರೆಯ ಮುಂಭಾಗ ಕಾರಿನಲ್ಲಿಯೇ ಮೃತ ಹೊಂದಿದ್ದಾರೆ. ಅಶ್ವಿನ್ ಕುಮಾರ್ ಕೈ ಮೇಲೆ ಸುಟ್ಟ ಗಾಯಗಳಿರುವುದು ಕಂಡು ಬಂದಿದೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಕೊಡಿಗೆಹಳ್ಳಿ ಪೊಲೀಸರು ಹಾಗೂ ಎಫ್ಎಸ್ಎಲ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Comments are closed.