ಕಾವೇರಿ ಬಾರ್‌ನ ಕೊಠಡಿಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ !

Bantwal : ವಿಟ್ಲದ ಕಾವೇರಿ ಬಾರ್ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬರ ದೇಹ ಚಿಂತಾಜನಕ ಸ್ಥಿತಿಯಲ್ಲಿ ಕಂಡು ಬಂದ ಘಟನೆ ನಡೆದಿದೆ. ವಿಟ್ಲ ಮಂಗಳೂರು ರಸ್ತೆಯ ಕೋಡಿ ಕಾವೇರಿ ಬಾರ್ & ರೆಸ್ಟೋರೆಂಟ್ ಲಾಡ್ಜ್‌ನಲ್ಲಿ ವ್ಯಕ್ತಿಯೊಬ್ಬರು ಕಳೆದ ಒಂದು ವಾರಗಳ ಹಿಂದೆ ಬಂದು ತಂಗಿದ್ದು, ಮಾ.2ರಂದು ಮುಂಜಾನೆ ಲಾಡ್ಜ್ ಸಿಬ್ಬಂದಿಯವರು ಕೋಣೆಯ ಬಾಗಿಲು ತೆಗೆಯುತ್ತಿದ್ದಂತೆ ಕೋಣೆಯಲ್ಲಿ ಮಲಗಿದ್ದ ವ್ಯಕ್ತಿಯು ರಕ್ತದ ಮಡುವಿನಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಕಂಡುಬಂದಿದೆ.
ಕೂಡಲೇ ಸಿಬ್ಬಂದಿಗಳು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಪರಿಶೀಲನೆ ನಡೆಸಿ ವಿಟ್ಲ ಸರಕಾರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಚಿಂತಾಜನಕ ಸ್ಥಿತಿಯಲ್ಲಿ ಕಂಡುಬಂದ ವ್ಯಕ್ತಿಯನ್ನು ಕೇರಳ ಮೂಲದ ಸುಜೇಶ್ ಎಂದು ಗುರುತಿಸಲಾಗಿದೆ. ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಮಹಿಳೆಯೊಬ್ಬರು ಈತನನ್ನು ವಿಟ್ಲಕ್ಕೆ ಬರಲು ಹೇಳಿ ಈತ ಬಂದಿದ್ದಾನೆ ಎಂಬ ಮಾಹಿತಿ ಲಭಿಸಿದ್ದು, ಇನ್ನೊಂದೆಡೆ ಈತನಿಗೆ ಫಿಡ್ಸ್ ಕಾಯಿಲೆ ಇದೆ ಎಂಬ ಮಾಹಿತಿಯೂ ಲಭಿಸಿದೆ. ಆದರೆ ಈತನ ಈ ಪರಿಸ್ಥಿತಿಗೆ ಕಾರಣಗಳು ನಿಗೂಢವಾಗಿದ್ದು, ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದೆ.
Comments are closed.