U.P: ಹಣ ನೀಡಲು ಒಲ್ಲೆ ಎಂದ ವ್ಯಕ್ತಿಯ ಮೇಲೆ ಮಂಗಳಮುಖಿಯರಿಂದ ಹಲ್ಲೆ; ವೀಡಿಯೋ ವೈರಲ್ ‌

Share the Article

U.P: ಉತ್ತರ ಪ್ರದೇಶದ ಬರೇಲಿಯಲ್ಲಿ ಮಂಗಳಮುಖಿಯರ ವರ್ತನೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಈ ವರ್ತನೆ ಕಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಹಣ ಕೊಡಲು ನಿರಾಕರಿಸಿದನೆಂದು ಮೂರು ನಾಲ್ಕು ಜನ ಮಂಗಳಮುಖಿಯರು ವ್ಯಕ್ತಿಯೊಬ್ಬನ ಮೇಲೆ ದರ್ಪ ತೋರಿಸಿದ್ದಾರೆ. ಅಲ್ಲದೇ ಆ ವ್ಯಕ್ತಿಗೆ ರಸ್ತೆಯಲ್ಲಿಯೇ ಆತನ ಮೇಲೆ ಕೈ ಮಾಡಿದ್ದಾರೆ. ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಬರೇಲಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Comments are closed.