Lucknow: ಮುದ್ದಿನ ಬೆಕ್ಕು ಸಾವು; ದುಃಖ ತಡೆಯಲಾರದೆ ಮಹಿಳೆ ಆತ್ಮಹತ್ಯೆ!

Lucknow: ಮನೆಯ ಮುದ್ದು ಬೆಕ್ಕು ಸಾವನ್ನಪ್ಪಿದ ದುಃಖವನ್ನು ತಡೆಯಲಾರದೆ ಅದನ್ನು ಸಾಕಿದ ಮಹಿಳೆ ಕೂಡಾ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಹಸನ್‌ಪುರ ಪಟ್ಟಣದ ರಾಹ್ರಾದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯ ಪೂಜಾ (35) ಮೃತ ಮಹಿಳೆ

ಬೆಕ್ಕೆಂದರೆ ತನ್ನ ಮಗುವಿನಂತೆ ಸಾಕಿಕೊಂಡಿದ್ದ ಪೂಜಾಗೆ ಊಟ, ತಿಂಡಿ, ಮಲಗುವುದು ಎಲ್ಲಾ ಕೂಡಾ ಬೆಕ್ಕಿನ ಜೊತೆನೇ ಆಗಿತ್ತು. ಅಂತಹ ಬೆಕ್ಕು ಇತ್ತೀಚೆಗೆ ಮೃತಪಟ್ಟಿದೆ. ತನ್ನ ಹೆಚ್ಚಿನ ಸಮಯವನ್ನು ಪೂಜಾ ಬೆಕ್ಕಿನ ಜೊತೆಗೆ ಕಳೆಯುತ್ತಿದ್ದು, ಆಕೆಯ ಬೆಕ್ಕಿನ ಮರಣದಿಂದ ಜಗತ್ತೇ ಶೂನ್ಯ ಅನ್ನಿಸಿಬಿಟ್ಟಿದೆ.

ಊಟ ನಿದ್ದೆ ಸರಿಯಾಗಿ ಬಾರದೆ ನೋವಿನಿಂದ ಇದ್ದಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ ಎಂದು ವರದಿಯಾಗಿದೆ. ಮಾ.1 ರಂದು ಶನಿವಾರ ಸಂಜೆ ಹಸನ್‌ಪುರ ಪಟ್ಟಣದ ರಹ್ರಾ ರಸ್ತೆಯಲ್ಲಿನ ತನ್ನ ಮನೆಯ ಮೂರನೇ ಮಹಡಿಯಲ್ಲಿ ನೇಣು ಬಿಗಿದುಕೊಂಡು ಪೂಜಾ ಸಾವಿಗೆ ಶರಣಾಗಿದ್ದಾರೆ.

ಪೊಲೀಸರು ಘಟನಾ ಸ್ಥಲಕ್ಕೆ ಆಗಮಿಸಿ, ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತನಿಖೆ ನಡೆಯುತ್ತಿದೆ.

Comments are closed.