TTD: ಇಷ್ಟು ಲಕ್ಷ ದುಡ್ಡು ನೀಡಿದರೆ ತಿರುಮಲದಲ್ಲಿ ಒಂದು ದಿನದ ಅನ್ನಪ್ರಸಾದ ಸೇವೆಗೆ ಅವಕಾಶ – TTD ಇಂದ ಹೊಸ ಯೋಜನೆ ಘೋಷಣೆ !!

Share the Article

TTD: ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿಯು ತಿಮ್ಮಪ್ಪನ ಸೇವೆಗಯ್ಯಲು ಭಕ್ತಾದಿಗಳಿಗೆ ಹೊಸ ಯೋಜನೆ ಯನ್ನು ಜಾರಿಗೊಳಿಸಿದ್ದು ನೀವು ಬರೋಬ್ಬರಿ 44 ಲಕ್ಷ ನೀಡಿದರೆ ಒಂದು ದಿನದ ಅನ್ನಸಂತರ್ಪಣೆ ಸೇವೆಯನ್ನು ಮಾಡಬಹುದು.

ಒಂದು ಇಡೀ ದಿನದ ಸೇವೆಯಲ್ಲಿ ಬೆಳಗ್ಗಿನ ಉಪಾಹಾರಕ್ಕೆ ₹10 ಲಕ್ಷ ಹಾಗೂ ಮಧ್ಯಾಹ್ನದ ಊಟಕ್ಕೆ ₹17 ಲಕ್ಷ ಪಾವತಿಸಬೇಕಿದೆ. ಮೂರು ಹೊತ್ತಿನ ಅನ್ನದಾನಕ್ಕೆ ₹44 ಲಕ್ಷ ಪಾವತಿಸಬೇಕಿದೆ.

ಇದರೊಂದಿಗೆ ದೇವಾಲಯದಲ್ಲಿ ಭಕ್ತರಿಗೆ ಅನ್ನದಾನ ಮಾಡಲು ಬಯಸುವ ದಾನಿಗಳು ಇನ್ನು ಮುಂದೆ ವೈಯಕ್ತಿಕವಾಗಿ ಅನ್ನಪ್ರಸಾದವನ್ನು ಬಡಿಸಬಹುದು. ಮತ್ತು ಅವರ ಹೆಸರುಗಳನ್ನು ಪ್ರದರ್ಶಿಸಲಾಗುತ್ತದೆ ಎಂದೂ ತಿಳಿಸಿದೆ.

ದೇವರಿಗೆ ಕೋಟಿಗಟ್ಟಲೆ ಕೊಟ್ಟು ಚಿನ್ನ ಒಡವೆಗಳನ್ನು, ವಜ್ರಗಳನ್ನು ನೀಡುವ ಅನೇಕ ಭಕ್ತರನ್ನು ನಾವು ನೋಡಿದ್ದೇವೆ. ಇದು ಅವರವರ ನಂಬಿಕೆ, ಭಾವನೆಗಳಿಗೆ ಬಿಟ್ಟದ್ದು. ಆದರೆ ಈ ಎಲ್ಲವುದಕ್ಕಿಂತಲೂ ಅನ್ನದಾನ ಶ್ರೇಷ್ಠದಾನವಾಗಿದೆ. ಹೀಗಾಗಿ ಎಲ್ಲಾ ಹರಕೆಗಳ ತೀರಿಸುವಿಕೆಯ ಬದಲಾಗಿ ಸಿರಿವಂತರು ಈ ರೀತಿಯ ದಾನಗಳ ಮುಖಾಂತರ ದೇವರ ಸೇವೆಗಯ್ಯಲು ಇದು ಒಂದು ಉತ್ತಮ ಅವಕಾಶ ಎನ್ನಬಹುದು.

Comments are closed.