Harassement: ಜಾತ್ರೆಯಲ್ಲಿ ಕೇಂದ್ರ ಸಚಿವರ ಮಗಳಿಗೆ ಕಿರುಕುಳ-ಓರ್ವನ ಬಂಧನ

Share the Article

Mumbai: ಕೇಂದ್ರ ಸಚಿವರೊಬ್ಬರ ಮಗಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಜಲ್ಗಾಂವ್‌ ಜಿಲ್ಲೆಯ ಜಾತ್ರೆಯಲ್ಲಿ ತನ್ನ ಅಪ್ರಾಪ್ತ ಮಗಳು ಕಿರುಕುಳಕ್ಕೊಳಗಾದ ನಂತರ ಯೂನಿಯನ್‌ ಕ್ಯಾಬಿನೆಟ್‌ನ ಮಂತ್ರಿಯೊಬ್ಬರು ಮಹಾರಾಷ್ಟ್ರದಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಪ್ರಶ್ನೆ ಮಾಡಿದ್ದರು.

ಬಿಜೆಪಿ ನಾಯಕಿ ರಾಕ್ಷಾ ಖಡ್ಸೆ ಅವರು ಪಕ್ಷದ ಕಾರ್ಯಕರ್ತರು ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಶಿವರಾತ್ರಿಯ ಸಂದರ್ಭ ಕೋಥಾಲಿಯಲ್ಲಿ ಪ್ರತಿವರ್ಷ ಯಾತ್ರೆ ಮಾಡಲಾಗುತ್ತದೆ. ನನ್ನ ಮಗಳು ನಿನ್ನೆ ಅಲ್ಲಿಗೆ ಹೋಗಿದ್ದಳು. ಅಲ್ಲಿ ಕೆಲ ಹುಡುಗರು ಆಕೆಗೆ ಕಿರುಕುಳ ನೀಡಿದ್ದಾರೆ. ಈ ಕುರಿತು ದೂರು ಸಲ್ಲಿಸಲು ನಾನು ಪೊಲೀಸ್‌ ಠಾಣೆಗೆ ಬಂದಿದ್ದೇನೆ ಎಂದು ಖಡ್ಸೆ ಹೇಳಿದ್ದಾರೆ.

ಆರೋಪಿ ಹಲವಾರು ಹುಡುಗಿಯರ ಜೊತೆ ಈ ರೀತಿ ವರ್ತನೆ ಮಾಡಿದ್ದಾರೆ. ಮಧ್ಯಪ್ರವೇಶಿಸಲು ಪ್ರಯತ್ನ ಮಾಡಿದ ಅವರ ಅಂಗರಕ್ಷಕರ ಜೊತೆ ಕೂಡಾ ಘರ್ಷಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಏಳು ಆರೋಪಿಗಳ ಕುರಿತು ಮಾಹಿತಿ ಲಭ್ಯವಿದೆ. ಓರ್ವನ ಬಂಧನವಾಗಿದೆ ಎಂದು ಮುಕ್ತೈನಗರ ಉಪ ಪೊಲೀಸ್‌ ವರಿಷ್ಠಾಧಿಕಾರಿ ಕುಶಾನತ್‌ ಪಿಂಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ.

Comments are closed.