Rashmika Mandanna: ʼನಾನು ಹೈದರಾಬಾದ್‌ನವಳುʼ ಎಂದ ರಶ್ಮಿಕಾ ಮಂದಣ್ಣಗೆ ಕರವೇ ನಾರಾಯಣ ಗೌಡ ಪ್ರತಿಕ್ರಿಯೆ

Rashmika Mandanna: ನಟಿ ರಶ್ಮಿಕಾ ಮಂದಣ್ಣ ಸಿನಿಮಾ ರಂಗದಲ್ಲಿ ಖ್ಯಾತಿ ಪಡೆದವರು. ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ʼಛಾವಾʼ ಸಿನಿಮಾದ ಇವೆಂಟ್‌ನಲ್ಲಿ ʼನಾನು ಹೈದರಾಬಾದ್ ಮೂಲದವಳುʼ ಎಂದು ಹೇಳಿದ್ದು ನೋಡಿ ಕರ್ನಾಟಕದ ಜನತೆಗೆ ಈಕೆಯ ಮೇಲಿದ್ದ ಅಲ್ಪ ಸ್ವಲ್ಪ ಅಭಿಮಾನ ಕೂಡಾ ನುಚ್ಚು ನೂರಾಗಿದೆ.
ಈಗ ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ ಅವರು ಕೂಡಾ ಈ ಕುರಿತು ಮಾತನಾಡಿದ್ದು, ನಟಿಯ ಹೇಳಿಕೆಯನ್ನು ಖಂಡಿಸಿದ್ದಾರೆ.
ʼನಾನು ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ಒಂದು ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿದೆ. ಅದು ಚಲನಚಿತ್ರಕ್ಕೆ ಸಂಬಂಧ ಪಟ್ಟದ್ದು. ಅದರಲ್ಲಿ ಕರ್ನಾಟಕದ ಕೊಡಗಿನ ಹೆಣ್ಣುಮಗಳೋರ್ವಳು ಕನ್ನಡದ ಮೂಲಕ ಪರಿಚಯವಾಗಿ ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿರುವವಳು, ಅಲ್ಲಿ ತಾನು ಆಂಧ್ರಪ್ರದೇಶದವಳು ಅಂತ ಹೇಳಿಕೆ ನೀಡಿದಳು. ನೀವು ಚಿಗುರಿದ ಬಳಿಕ, ನಿಮಗೆ ಬೇರೆ ಬೇರೆ ಭಾಷೆಯಲ್ಲಿ ಅವಕಾಶ ಸಿಕ್ಕ ಕೂಡಲೇ ಕನ್ನಡ ನಾಡನ್ನು ಮರೆಯುತ್ತೀರಿʼ ಎಂದು ಹೇಳಿದ್ದಾರೆ.
ನಮ್ಮ ನೆಲದ ಭಾಷೆ, ಸಂಸ್ಕೃತಿ ಬಗ್ಗೆ ಗೌರವ ಇರಬೇಕು. ನೀವು ಎಷ್ಟೇ ದೊಡ್ಡ ವ್ಯಕ್ತಿಗಳಾಗಿ ಬೆಳೆಯಿರಿ. ಈ ನೆಲದ ಋಣ ತೀರಿಸಬೇಕು. ಕುವೆಂಪು ಹೇಳಿದ ರೀತಿಯಲ್ಲೇ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬುವುದನ್ನು ಇನ್ಮೇಲಾದರೂ ಚೆನ್ನಾಗಿ ಅರ್ಥ ಮಾಡಿಕೊಳ್ಳಿʼ ಎಂದು ನಾರಾಯಣ ಗೌಡ ಹೇಳಿದ್ದಾರೆ.
Comments are closed.