D K Shivakumar: ಈಶ ಫೌಂಡೇಶನ್‌ನಲ್ಲಿ ಡಿಕೆಶಿ-ಅಮಿತಾ ಶಾ ಭೇಟಿ; ʼಕೈʼ ಚರ್ಚೆ

Share the Article

D K Shivakumar: ಈಶ ಫೌಂಡೇಶನ್‌ನಲ್ಲಿ ನಡೆದ ಶಿವರಾತ್ರಿ ಉತ್ಸವದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಭಾಗವಹಿಸಿದ್ದು ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸದ್ಗುರು ಅವರ ಜೊತೆ ವೇದಿಕೆ ಹಂಚಿಕೊಂಡ ವಿಷಯಕ್ಕೆ ಸಂಬಂಧಪಟ್ಟಂತೆ ರಾಜ್ಯ ಸಂಪುಟದ ಸಚಿವರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.

ನಮ್ಮ ನಾಯಕ ರಾಹುಲ್‌ ಗಾಂಧಿಯನ್ನೇ ಯಾರೆಂದು ನನಗೆ ಗೊತ್ತಿಲ್ಲ ಎನ್ನುವ ಸದ್ಗುರು ಜೊತೆ ವೇದಿಕೆ ಹಂಚಿಕೊಳ್ಳುವುದು ಎಷ್ಟು ಸರಿ? ಅದರ ಔಚಿತ್ಯವೇನಿತ್ತು ಎನ್ನುವುದನ್ನು ವೇದಿಕೆ ಹಂಚಿಕೊಂಡವರೇ ಹೇಳಬೇಕು ಎಂದು ಡಿಕೆಶಿ ನಡೆಗೆ ಸಚಿವ ಕೆ.ಎನ್‌ ರಾಜಣ್ಣ ಅವರು ಹಾಸನದಲ್ಲಿ ಡಿಕೆಶಿ ನಡೆಗೆ ಬೇಸರ ವ್ಯಕ್ತಪಡಿಸುತ್ತಾ ಹೇಳಿದರು.

ʼಡಿಕೆಶಿ ಕಟ್ಟಾ ಕಾಂಗ್ರೆಸ್ಸಿಗ. ಅವರು ಬಿಜೆಪಿ ಸೇರುತ್ತಾರೆ ಎನ್ನುವುದು ಊಹಾಪೋಹ. ಕಾಂಗ್ರೆಸ್‌-ಬಿಜೆಪಿಯವರು ಎಷ್ಟೋ ಧಾರ್ಮಿಕ ಕಾರ್ಯಗಳಲ್ಲಿ ಒಟ್ಟಿಗೆ ಸೇರುತ್ತೇವೆ, ಅದರಲ್ಲಿ ತಪ್ಪೇನುಂಟು? ಎಂದು ವಿಜಯಪುರದಲ್ಲಿ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

Comments are closed.