Rohtak: 22ರ ಹರೆಯದ ಕಾಂಗ್ರೆಸ್ ಕಾರ್ಯಕರ್ತೆಯ ಶವ ಸೂಟ್ಕೇಸ್ನೊಳಗೆ ಬಸ್ ನಿಲ್ದಾಣದಲ್ಲಿ ಪತ್ತೆ!

Rohtak: ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯೊಬ್ಬರ ಹೆಣವು ಸೂಟ್ಕೇಸ್ನಲ್ಲಿ ಪತ್ತೆಯಾದ ಘಟನೆ ಹರಿಯಾಣದ ರೋಹ್ಟಕ್ನಲ್ಲಿ ನಡೆದಿದೆ.


ಹಿಮಾನಿ ನರ್ವಾಲ್ (22ವರ್ಷ) ಅವರ ಹೆಣವನ್ನಿರಿಸಿ ಸೂಟ್ಕೇಸ್ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದೆ. ಈ ಕುರಿತು ಇದೀಗ ಕಾಂಗ್ರೆಸ್ ತನಿಖೆಗೆ ಆಗ್ರಹ ಮಾಡಿದೆ. ಮೃತ ಹಿಮಾನಿ ನರ್ವಾಲ್ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು.
ಸಂಪ್ಲಾ ಬಸ್ ನಿಲ್ದಾಣದ ಬಳಿ ಸೂಟ್ಕೇಸ್ ಪತ್ತೆಯಾಗಿದ್ದು, ನಾಗರಿಕರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಬಂದಾಗ ಹಿಮಾನಿ ನರ್ವಾಲ್ ಮೃತದೇಹ ಸೂಟ್ಕೇಸ್ನೊಳಗೆ ಇತ್ತು.
ರೋಹ್ಟಕ್ನ ವಿಜಯ ನಗರ ನಿವಾಸಿಯಾದ ಹಿಮಾನಿ ಅವರ ಕುತ್ತಿಗೆಯನ್ನು ದುಪಟ್ಟದಿಂದ ಬಿಗಿಯಲಾಗಿತ್ತು. ಕೈಗೆ ಮೆಹಂದಿ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
Comments are closed.