Scam: ಟ್ರಾಫಿಕ್ ಫೈನ್ ಮೆಸೇಜ್! ಆ್ಯಪ್ ಡೌನ್ಲೋಡ್ ಮಾಡಿದ ಬೆನ್ನಲ್ಲೇ 5.6 ಲಕ್ಷ ರೂ. ಮಾಯ!

Scam: ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಚಲನ್ ಬಗ್ಗೆ ಬಂದ ವಾಟ್ಸಾಪ್ ಸಂದೇಶವನ್ನು ನಂಬಿದ ವ್ಯಕ್ತಿಯೊಬ್ಬರು “ವಾಹನ್ ಪರಿವಾಹನ್” ಎಂಬ ನಕಲಿ ಎಪಿಕೆ ಆ್ಯಪ್ ಡೌನ್ಲೋಡ್ ಮಾಡಿದ ಕಾರಣ ಅವರ ಕ್ರೆಡಿಟ್ ಕಾರ್ಡ್ ಖಾತೆಯಿಂದ 5.6 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಸಾರ್ವಜನಿಕರು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ವಾಟ್ಸ್ಆ್ಯಪ್ ಸಂದೇಶದಲ್ಲಿ ಏನಿತ್ತು?
ನಿಮ್ಮ ವಾಹನಕ್ಕೆ ಸಂಚಾರ ನಿಯಮ ಉಲ್ಲಂಘನೆಯ ದಂಡ ವಿಧಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಪರಿಶೀಲಿಸಲು ಇಲ್ಲಿ ನೀಡಿದ ಲಿಂಕ್ ಮೂಲಕ ‘‘ವಾಹನ್ ಪರಿವಾಹನ್’’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಎಂದು ವಾಟ್ಸ್ಆ್ಯಪ್ ಸಂದೇಶದಲ್ಲಿ ಸೂಚನೆ ನೀಡಲಾಗಿತ್ತು.
ನಿಮ್ಮ ವಾಹನಕ್ಕೆ ಸಂಚಾರ ನಿಯಮ ಉಲ್ಲಂಘನೆಯ ದಂಡ ವಿಧಿಸಲಾಗಿದ್ದು, ಅದರ ಕುರಿತಾದ ಪುರಾವೆಗಳನ್ನು ಅಥವಾ ಸಿಸಿಟಿವಿ ಕ್ಯಾಮರಾ ಸೆರೆಹಿಡಿದಿರುವ ಚಿತ್ರಗಳು ಇಲ್ಲಿವೆ. ಅದನ್ನು ಪರಿಶೀಲಿಸಬೇಕಾದಲ್ಲಿ ಇಲ್ಲಿ ನೀಡಿರುವ ಲಿಂಕ್ ಮೂಲಕ ‘‘ವಾಹನ್ ಪರಿವಾಹನ್’’ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಎಂದು ವ್ಯಕ್ತಿಗೆ ಬಂದ ವಾಟ್ಸ್ಆ್ಯಪ್ ಸಂದೇಶದಲ್ಲಿ ಉಲ್ಲೇಖವಾಗಿತ್ತು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಉಲ್ಲೇಖಿಸಲಾದ ವಾಹನ ಸಂಖ್ಯೆಯು ಅವನ ವಾಹನದ ಸಂಖ್ಯೆ ವಾಹನದ ನೋಂದಣಿ ಸಂಖ್ಯೆ ಸರಿಯಾಗಿಯೇ ಇದ್ದುದರಿಂದ ಆ ವ್ಯಕ್ತಿ ಎಪಿಕೆ ಫೈಲ್ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ್ದಾರೆ. ಅದಾದ 24 ಗಂಟೆಯ ಅವಧಿಯಲ್ಲಿ ಅವರಿಗೆ ಗೊತ್ತಾಗದಂತೆ ಅವರ ಕ್ರೆಡಿಟ್ ಕಾರ್ಡ್‌ಗಳಿಂದ 5.6 ಲಕ್ಷ ರೂ. ಡೆಬಿಟ್ ಆಗಿದೆ. ನಂತರ, ಫೋನ್ ಹ್ಯಾಕ್ (Scam) ಆಗಿದೆ ಎಂಬುದನ್ನು ಅರಿತ ವ್ಯಕ್ತಿ, ಫೆಬ್ರವರಿ 22 ರಂದು ಪಶ್ಚಿಮ ಸಿಇಎನ್ ಪೊಲೀಸರಿಗೆ ಘಟನೆಯ ಬಗ್ಗೆ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
Comments are closed.