Shivamogga: ಸತ್ತು ಬದುಕಿ ಅಚ್ಚರಿ ಮೂಡಿಸಿದ್ದ ಮಹಿಳೆ ಸಾವು

Shivamogga: ಸತ್ತು ಬದುಕಿ ಅಚ್ಚರಿ ಮೂಡಿಸಿದ್ದ ಮಹಿಳೆಯೊಬ್ಬರು ಇದೀಗ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಹೊಂದಿದ್ದಾರೆ. ಭದ್ರಾವತಿಯ ಮಹಿಳೆ ಮೀನಾಕ್ಷಿ (52) ಮೃತಪಟ್ಟ ಮಹಿಳೆ.

ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮೀನಾಕ್ಷಿ ವೈದ್ಯರು ನಿಧನರಾಗಿದ್ದಾರೆ ಎಂದು ಹೇಳಿದ್ದರಿಂದ ಮಂಗಳವಾರ ಬೆಳಗ್ಗೆ ಮನೆಗೆ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಎಲ್ಲರೂ ಅಂತಿಮ ದರ್ಶನಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಕಣ್ಣು ಬಿಟ್ಟು ನೋಡಿ ಉಸಿರಾಡಿದ ಮೀನಾಕ್ಷಿ ಅವರನ್ನು ಕುಟುಂಬದವರು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

 

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೀನಾಕ್ಷಿ ಅವರು ಮೃತ ಹೊಂದಿದ್ದಾರೆ. ಶುಕ್ರವಾರ ಭದ್ರಾವತಿಯಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ.

Comments are closed.