Mangalore: ಜಾತ್ರೆ, ಕಂಬಳೋತ್ಸವ, ಬಸ್‌, ರೈಲ್ವೇ ನಿಲ್ದಾಣಗಳಲ್ಲಿ ಬೈಕ್‌ ಕಳ್ಳತನ ಜಾಲ ಭೇದಿಸಿದ ಪೊಲೀಸರು

Share the Article

Mangalore: ಜಾತ್ರೆ, ಕಂಬಳೋತ್ಸವ, ಬಸ್‌, ರೈಲ್ವೇ ನಿಲ್ದಾಣಗಳಲ್ಲಿ ನಿಲ್ಲಿಸಿ ಹೋಗುವ ಬೈಕ್‌, ದ್ವಿಚಕ್ರ ವಾಹನಗಳನ್ನು ಕದ್ದು ರಹಸ್ಯ ಮಾರಾಟ ಮಾಡುತ್ತಿದ್ದ ಜಾಲವನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಭೇದಿಸಿರುವ ಘಟನೆ ನಡೆದಿದೆ. ಪ್ರಮುಖ ಆರೋಪಿ ಮಣಿಕಂಠ ಗೌಡ ಕೆ (24) ಸೇರಿ ನಾಲ್ವರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಮಣಿಕಂಠ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದವನು. ಮೂಡಬಿದಿರೆಯ ಒಂದು ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಈತ ಅಂತರ್‌ ಜಿಲ್ಲಾ ದ್ವಿಚಕ್ರ ವಾಹನ ಕಳ್ಳನಾಗಿದ್ದು ದ.ಕ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಕಳವು ಮತ್ತು ಮಾರಾಟ ಮಾಡುತ್ತಿದ್ದರು. ಪೊಲೀಸರು ಈತ ಕಳವು ಮಾಡಿ ಬಚ್ಚಿಟ್ಟ ಸರಿ ಸುಮಾರು 20 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕದ್ದ ಬೈಕ್‌ಗಳನ್ನು ರೀಸೇಲ್‌ ಮಾಡುವುದಕ್ಕಾಗಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ. ಈತನಿಂದ ಕಾರ್ಕಳದ ಸತೀಶ್‌ ಬಂಗೇರ, ಮೂಡಬಿದ್ರೆಯ ದೀಕ್ಷಿತ್‌, ತಾಳಿಕೋಟೆಯ ಸಂಗಣ್ಣ ಹೊನ್ನಳ್ಳಿ ಎಂಬುವವರು ಬೈಕ್‌ಗಳನ್ನು ಖರೀದಿ ಮಾಡಿ ರೀ ಸೇಲ್‌ ಮಾಡುತ್ತಿದ್ದು, ಇವರನ್ನು ಪೊಲೀಸರು ಬಂಧನ ಮಾಡಿದ್ದಾರೆ.

Comments are closed.