Udupi: ದುಬೈ ಕಾರುಗಳ ಕರ್ಕಶ ಶಬ್ದ-ಪೊಲೀಸರಿಂದ ದಂಡ

Share the Article

Udupi: ದುಬೈ ನೋಂದಣಿಯ ಕಾರುಗಳು ನಿಯಮ ಮೀರಿ ಕರ್ಕಶ ಸದ್ದು ಮಾಡುತ್ತಿದ್ದ ಘಟನೆಗೆ ಕುರಿತಂತೆ ಕಾರುಗಳನ್ನು ವಶಕ್ಕೆ ಪಡೆದ ಮಣಿಪಾಲ ಪೊಲೀಸರು 1500 ರೂ.ದಂಡ ವಿಧಿಸಿದ್ದಾರೆ.

ದುಬೈ ನಿವಾಸಿ ಕೇರಳ ಮೂಲದ ಸುಲೈಮಾನ್‌ ಮೊಹಮ್ಮದ್‌ (29), ಮೊಹಮ್ಮದ್‌ ಶರೀಫ್‌ (27), ಅಬ್ದುಲ್‌ ನಜೀರ್‌ (25) ಎಂಬ ಯುವಕರು ಮಣಿಪಾಲದಲ್ಲಿರುವ ಸ್ನೇಹಿತರ ಆಹ್ವಾನದ ಮೇರೆಗೆ ಡಾಡ್ಜ್‌ ಕಾರಿನಲ್ಲಿ ಬಂದಿದ್ದರು. ಜಿಲ್ಲಾಧಿಕಾರಿ ರಸ್ತೆಯಲ್ಲಿ ನಿಯಮ ಮೀರಿ ಓಡಾಟ ಮಾಡಿದ್ದಾರೆ. ಹೀಗಾಗಿ ಪೊಲೀಸರು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಇವರು ಭಾರತದಲ್ಲಿ ಆರು ತಿಂಗಳು ಓಡಾಡಲು ಕಾರುಗಳನ್ನು ಹಡಗಿನ ಮುಖಾಂತರ ಆಮದು ಮಾಡಿಕೊಂಡಿದ್ದರು. ದುಬೈ ದೇಶಕ್ಕೆ 30 ಲಕ್ಷ ರೂ, ಭಾರತಕ್ಕೆ 1 ಕೋಟಿ ರೂ. ಹಣ ಕಟ್ಟಿರುವುದಾಗಿ ಪೊಲೀಸರಲ್ಲಿ ಯುವಕರು ಹೇಳಿದ್ದಾರೆ.

ಆರ್‌ಟಿಓ ಕಾರುಗಳ ದಾಖಲೆಗಳನ್ನು ಕಳುಹಿಸಿದ ಪೊಲೀಸರು, ದುಬೈ ನೋಂದಣಿ ಕಾರು ಓಡಾಟಕ್ಕೆ ಅನುಮತಿ ಇದೆಯೇ ಎಂದು ಪರಿಶೀಲನೆ ಮಾಡಿದಾಗ ಅನುಮತಿ ಇರುವ ಹಿನ್ನೆಲೆಯಲ್ಲಿ ಆರ್‌ಟಿಓ ಅನುಮತಿ ಮೇರೆಗೆ ಕರ್ಕಶ ಶಬ್ದ ಮಾಡಿದ 3 ಕಾರುಗಳ ಮೇಲೆ 1500 ರೂ. ಫೈನ್‌ ಹಾಕಿ ಕಳುಹಿಸಿದ್ದಾರೆ.

Comments are closed.