Health: ಕಲರ್ಫುಲ್ ಕೆಮಿಕಲ್​ ಕಲ್ಲಂಗಡಿಯನ್ನು ಪತ್ತೆ ಮಾಡುವುದ್ಹೇಗೆ?ಇಲ್ಲಿದೆ ನೋಡಿ

Health: ಬಿಸಿಲಿನ ದಾಹಕ್ಕೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಜಾಸ್ತಿಯಾಗುತ್ತದೆ. ಕಲ್ಲಂಗಡಿಯಲ್ಲಿ ಹೆಚ್ಚು ನೀರಿನಾಂಶ ಇರುವುದರಿಂದ ಇದು ದೇಹದಲ್ಲಿ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುವುದರ ಜೊತೆಗೆ ದೇಹಕ್ಕೆ ತಂಪನ್ನು ನೀಡುತ್ತದೆ. ಆದ್ರೆ ಕರ್ನಾಟಕದ ಜನರು ಕಲ್ಲಂಗಡಿ ಹಣ್ಣು ಖರೀದಿಸಿ ಸೇವಿಸುವ ಮುನ್ನ ಕೊಂಚ ಎಚ್ಚರವಹಿಸಬೇಕಿದೆ. ಏಕೆಂದರೆ ರಾಜ್ಯದ ಹಲವು ಕಡೆಗಳಲ್ಲಿ ನಕಲಿ ಕಲ್ಲಂಗಡಿ ಹಣ್ಣುಗಳ ಹವಾ ಮಾರುಕಟ್ಟೆಯಲ್ಲಿ ಜೋರಾಗಿದೆ. ಹಾಗಾದ್ರೆ, ಕೆಮಿಕಲ್​ ಕಲ್ಲಂಗಡಿ ಸೇವಿಸಿದ್ರೆ ಏನಾಗುತ್ತೆ? ಇನ್ನು ಕೆಮಿಕಲ್​ ಕಲ್ಲಂಗಡಿ ಪತ್ತೆ ಮಾಡುವುದ್ಹೇಗೆ? ಇಲ್ಲಿದೆ ವಿವರ.

ಕೆಮಿಕಲ್​ ಕಲ್ಲಂಗಡಿ ಪತ್ತೆ ಹಚ್ಚುವುದು ಹೇಗೆ?

ಒಂದು ಸಣ್ಣ ಪೀಸ್ ಕಲ್ಲಂಗಡಿ ಹಣ್ಣನ್ನು ನೀರಿನಲ್ಲಿ ಬೆರೆಸಿ. ನೀರು ಗುಲಾಬಿ ಬಣ್ಣಕ್ಕೆ ತಿರುಗಿಯಾ ಎಂಬುದು ಗಮನಿಸಿ. ನೀರು ಗುಲಾಬಿ ಬಣ್ಣಕ್ಕೆ ತಿರುಗಿದ್ರೆ ಅದು ಕೆಮಿಕಲ್​ ಕಲ್ಲಂಗಡಿಯಾಗಿರುತ್ತೆ. ಗುಲಾಬಿ ಬಣ್ಣಕ್ಕೆ ತಿರುಗಿದ್ರೆ ಹಣ್ಣಿಗೆ ಕೃತಕ ಬಣ್ಣ ಸೇರಿಸಲಾಗಿರುತ್ತೆ.

ಅಥವಾ ಟಿಶ್ಯೂ ಪೇಪರ್​ನಿಂದ ಹಣ್ಣನ್ನು ಒತ್ತಿ ನೋಡಬೇಕು. ಆಗ ಟಿಶ್ಯೂ ಪೇಪರ್​ಗೆ ಕೆಂಪು ಬಣ್ಣ ಹತ್ತಿಕೊಂಡರೆ ಅದು ಕಲಬೆರಕೆ ಕಲ್ಲಂಗಡಿಯಾಗಿರುತ್ತೆ.

ಕೆಮಿಕಲ್​ ಕಲ್ಲಂಗಡಿ ಸೇವಿಸಿದ್ರೇ ಏನಾಗುತ್ತೆ?

ಕಲರ್ ಬರುವಂತೆ ಇಂಜೆಕ್ಟ್​ ಮಾಡಿರುವ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಫುಡ್ ಪಾಯ್ಸನಿಂಗ್​ನಂತಹ ಸಮಸ್ಯೆಗಳು ಆಗಲಿವೆ. ಅಲ್ಲದೇ ವಾಂತಿ ಭೇದಿಯಂತ ಸಮಸ್ಯೆಗಳಾಗುವ ಸಾಧ್ಯತೆಗಳಿವೆ. ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಮಿಕಲ್​ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಸರಿಯಾದ ಸಮಯಕ್ಕೆ ಹಸಿವು ಆಗುವುದಿಲ್ಲ. ಹಸಿವಿನ ಕೊರತೆ ನಮ್ಮಲ್ಲಿ ಕಾಡುತ್ತದೆ. ಇದರಿಂದ ಗ್ಯಾಸ್ಟ್ರಿಕ್​ ಸಮಸ್ಯೆ (Health) ಉಂಟಾಗುತ್ತೆ. ಜೊತೆಗೆ ಕಿಡ್ನಿ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಹುದು.

Comments are closed.