Ujire: ಉಜಿರೆ ಎಸ್.ಡಿ.ಎಂ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ವಿಶ್ವನಾಥ್.ಪಿ ನೇಮಕ

Ujire: ಉಜಿರೆಯ (Ujire) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಹಿರಿಯ ಅಧ್ಯಾಪಕ ಡಾ.ವಿಶ್ವನಾಥ ಪಿ ನೇಮಕಗೊಂಡಿದ್ದಾರೆ. ಡಾ.ಕುಮಾರ ಹೆಗ್ಡೆ ಅವರ ವಯೋಸಹಜ ನಿವೃತ್ತಿಯಿಂದ ತೆರವಾಗಿದ್ದ ಪ್ರಾಂಶುಪಾಲರ ಹುದ್ದೆಗೆ ವಿಶ್ವನಾಥ ಅವರು ಆಯ್ಕೆಯಾಗಿದ್ದಾರೆ.

ಇವರು 34 ವರ್ಷಗಳ ಬೋಧನಾನುಭವವುಳ್ಳವರಾಗಿದ್ದು ಕಳೆದ ಐದು ವರ್ಷಗಳಿಂದ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ ಅಧ್ಯಯನ ಪೂರೈಸಿ 1990ರಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಆರ್ಗ್ಯಾನಿಕ್ ಕೆಮಿಸ್ಟ್ರಿ ವಿಷಯದಲ್ಲಿ ವಿಶೇಷ ಪರಿಣತಿ ಪಡೆದವರು. ಅಲ್ಲದೇ ನವದೆಹಲಿಯ ಯುಜಿಸಿಯ ಫ್ಯಾಕಲ್ಟಿ ಇಂಪ್ಯೂವ್‌ಮೆಂಟ್ ಪ್ರೋಗ್ರಾಂನ ಭಾಗವಾಗಿ ಇವರು ಹೀಟರಾಸೈಕ್ಲಿಕ್ ಕೆಮಿಸ್ಟ್ರಿ ವಲಯದಲ್ಲಿ ನಡೆಸಿದ ಸಂಶೋಧನಾ ಅಧ್ಯಯನಕ್ಕಾಗಿ1999ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.

Comments are closed.