Hampi Utsava 2025: ಕಾರ್ಯಕ್ರಮ ವೀಕ್ಷಿಸಲು ಪೌರಕಾರ್ಮಿಕರ ಮನೆಮನೆಗೆ ತೆರಳಿ VIP ಪಾಸ್ ವಿತರಿಸಿದ ಜಿಲ್ಲಾಧಿಕಾರಿ

Hampi Utsava 2025: ಕರ್ನಾಟಕದ ಹಿರಿಮೆಯನ್ನು ಸಾರುವ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ‘ ಹಂಪಿ ಉತ್ಸವ 2025’ ಅತ್ಯಂತ ವಿಜೃಂಭಣೆಯಿಂದ ನೆರವೇರುತ್ತಿದೆ. ಲಕ್ಷಾಂತರ ಜನರು ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿರೂಪಾಕ್ಷನ ದರ್ಶನ ಪಡೆದು ಸಾಂಸ್ಕೃತಿಕ ವೈಭವದಲ್ಲಿ ನಿಂದೇಳುತ್ತಿದ್ದಾರೆ. ಇದೀಗ ಈ ಉತ್ಸವದಲ್ಲಿ ಒಂದು ವಿಶೇಷ ಘಟನೆ ನಡೆದಿದೆ.

ಹಂಪಿ ಉತ್ಸವದಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದವರು ಪೌರಕಾರ್ಮಿಕರು. ಹೀಗಾಗಿ ವಿಜಯನಗರ ಜಿಲ್ಲಾಧಿಕಾರಿಯವರು ಹಂಪಿ ಉತ್ಸವಕ್ಕಾಗಿ ಸ್ಥಳೀಯ ಪೌರಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಬರೋಬ್ಬರಿ 2,000 ವಿಐಪಿ ಪಾಸ್ ಗಳನ್ನು ವಿತರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಹೌದು, ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ಅವರು ಹೊಸಪೇಟೆ ಪಟ್ಟಣದ ಪೌರಕಾರ್ಮಿಕರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಪಾಸ್‌ಗಳನ್ನು ವಿತರಿಸಿದರು ಮತ್ತು ಅವರ ಕುಟುಂಬಗಳೊಂದಿಗೆ ಭೋಜನ ಸವಿದರು. ಅಲ್ಲದೆ ಅವರೆಲ್ಲರಿಗೂ ವಿಐಪಿ ಪಾಸ್‌ಗಳನ್ನು ವಿತರಿಸಿದರು.

ಇದು ಪ್ರತಿದಿನ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುವ ಪೌರಕಾರ್ಮಿಕರಿಗೆ ಸಲ್ಲಿಸುವ ಗೌರವ ಎಂದು ಡಿಸಿ ದಿವಾಕರ್ ಹೇಳಿದರು. “ಹಬ್ಬದ ಸಮಯದಲ್ಲಿ ಮತ್ತು ವರ್ಷದ ಉಳಿದ ದಿನಗಳಲ್ಲಿ ನಗರದ ನಿರ್ವಹಣೆ ಅವರು ಜವಾಬ್ದಾರಿಯಾಗಿರುತ್ತದೆ. ಮೊದಲ ಬಾರಿಗೆ, ನಾವು ಅವರಿಗೆ ಪ್ರತ್ಯೇಕ ಗ್ಯಾಲರಿಯನ್ನು ಕಾಯ್ದಿರಿಸಿದ್ದೇವೆ ಆದ್ದರಿಂದ ಅವರು ಎಲ್ಲಾ ಮನರಂಜನೆ ಮತ್ತು ಕಾರ್ಯಕ್ರಮಗಳನ್ನು ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.

Comments are closed.