Naga Sadhu: ಕುಂಭಮೇಳ ಮುಗಿಸಿ ಡೋಮಿನೋಸ್ ಗೆ ಪಿಜ್ಜಾ ತಿನ್ನಲು ಬಂದ ನಾಗಸಾಧುಗಳು!! ವಿಡಿಯೋ ವೈರಲ್

Naga Sadhu: ಪ್ರಯಾಗ್ರಾಜ್ ನಲ್ಲಿ ಸುಮಾರು ಒಂದೂವರೆ ತಿಂಗಳುಗಳ ಕಾಲ ನಡೆದ ಮಹಾ ಕುಂಭಮೇಳವೂ ವೈಭವದಿಂದ ತೆರೆ ಕಂಡಿದೆ. ಕೋಟ್ಯಾಂತರ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿ ಪುನೀತರಾಗಿದ್ದಾರೆ. ಅಂತಯೇ ಲಕ್ಷಾಂತರ ನಾಗ ಸಾಧುಗಳು ಈ ಅದ್ದೂರಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಸ್ತ ದೇಶದ ಜನರನ್ನು ಹರಸಿದ್ದಾರೆ. ಇದೀಗ ಕುಂಭಮೇಳ ಮುಗಿದ ಬಳಿಕ ಅವರೆಲ್ಲರೂ ತೀರ್ಥಕ್ಷೇತ್ರಗಳತ್ತ, ಹಿಮಾಲಯದತ್ತ, ಧಾರ್ಮಿಕ ಕೇಂದ್ರಗಳತ್ತ ಮುಖ ಮಾಡಿದ್ದಾರೆ. ಈ ನಡುವೆಯೇ ಇಲ್ಲೊಂದಿಷ್ಟು ನಾಗ ಸಾಧುಗಳು ಕುಂಭಮೇಳವನ್ನು ಮುಗಿಸಿ ಪಿಜ್ಜಾ ತಿನ್ನಲು ಡೋಮಿನಾಸ್ ಗೆ ಬಂದಿದ್ದಾರೆ. ಈ ಕುರಿತಂತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು, ಮಹಾಕುಂಭ ಮೇಳ ಮುಗಿದ ಬಳಿಕ ಒಂದಷ್ಟು ಸಾಧುಗಳು ಡೋಮಿನೋಸ್‌ಗೆ ಪಿಜ್ಜಾ ತಿನ್ನಲು ಬಂದಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿರುವ ಡೋಮಿನೋಸ್ ಔಟ್‌ಲೇಟ್‌ಗೆ ಮೂವರು ಸಾಧುಗಳು ಪಿಜ್ಜಾ ತಿನ್ನಲು ಬಂದಿದ್ದ ಸಂದರ್ಭದಲ್ಲಿ ಯುವತಿಯೊಬ್ಬಳು ಅದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾಳೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಅವರನ್ನು ನೆಮ್ಮದಿಯಿಂದ ತಿನ್ನಲು ಬಿಡಿ ಯುವತಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಕುರಿತ ವಿಡಿಯೋವನ್ನು prayagrajxpress ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, “ಪಿಜ್ಜಾ ತಿನ್ನಲು ಬಂದ ಸಾಧುಗಳುʼ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾಲ್ಕು ಜನ ಸಾಧುಗಳು ಪ್ರಯಾಗ್‌ರಾಜ್‌ನಲ್ಲಿರುವ ಡೊಮಿನೋಸ್ ಔಟ್‌ಲೆಟ್‌ನಲ್ಲಿ ಎಲ್‌ಇಡಿ ಮೆನುವನ್ನು ನೋಡುತ್ತಾ ಏನು ಆರ್ಡರ್ ಮಾಡೋದು ಎಂದು ಯೋಚಿಸುತ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು.
Comments are closed.