Shivamogga: ಸ್ವಾತಂತ್ರ್ಯ ಪಡೆದ ದೇಶದ ಮೊದಲ ಗ್ರಾಮ ‘ಈಸೂರ’ಲ್ಲಿ ಇದೆಂತ ದುರಂತ? ತೋಟಕ್ಕೆ ಮೇಕೆಗಳು ನುಗ್ಗಿದವೆಂದು ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ!!

Share the Article

Shivamogga: ತನ್ನ ತೋಟಕ್ಕೆ ಮೇಕೆಗಳನ್ನು ನುಗ್ಗಿಸಿದ್ದಾಳೆ ಎಂದು ಆರೋಪಿಸಿ ತೋಟದ ಮಾಲೀಕನೊಬ್ಬ ಮಹಿಳೆಯನ್ನು ವಿವಸ್ತ್ರಗೊಳಿಸಿ ಆಕೆಯ ಮೇಲೆ ಹಲ್ಲೆ ಮಾಡಿರುವ ನಾಚಿಕೆಗೇಡಿನ ಘಟನೆಯೊಂದು ನಡೆದಿದೆ. ಅಚ್ಚರಿಯೇನೆಂದರೆ ಸ್ವಾತಂತ್ರ್ಯ ಪಡೆದ ದೇಶದ ಮೊದಲ ಗ್ರಾಮ ಈಸೂರಿನಲ್ಲಿ ಇಂತಹ ಘಟನೆ ನಡೆದಿರುವುದು ದುರಂತವೇ ಸರಿ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ಅರುಣ್ ಎಂಬಾತ ಚಿಕ್ಕಜೋಗಿಹಳ್ಳಿಯ ಸರೋಜಮ್ಮ ಎಂಬುವವರ ಮೇಲೆ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದಾನೆ. ಚಿಕ್ಕಜೋಗಿಹಳ್ಳಿ ಗ್ರಾಮದ ಮಹಿಳೆ ತನ್ನ ತೋಟದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದಾಳೆ ಎಂದು ಕೋಪಗೊಂಡ ತೋಟದ ಮಾಲೀಕ ಹಾಗೂ ಆತನ ಪುತ್ರ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಹಿಳೆ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತೋಟದ ಮಾಲೀಕ ರಾಮನಹಳ್ಳಿ ಶಿವಕುಮಾರ್ ಮತ್ತು ಪುತ್ರ ಅರುಣ್ ವಿರುದ್ಧ ಸ್ಥಳೀಯ ಪೊಲೀಸರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳಿಗೆ ಪೊಲೀಸ್ ಬಲೆ ಬೀಸಿದ್ದಾರೆ.

Comments are closed.