Kadaba: ಮಹಾಶಿವರಾತ್ರಿಯಂದು ಶಾಲೆಯ ಸೊತ್ತಗಳೇ ನಾಶ

Share the Article

Kadaba: ಮಹಾಶಿವರಾತ್ರಿಯಂದು ಅಲಂಕಾರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಹೂವಿನ ಚಟ್ಟಿ, ವಾಲಿಬಾಲ್‌ ನೆಟ್‌, ಕಸದ ತೊಟ್ಟಿಯಲ್ಲಿದ್ದ ಕಸವನ್ನು ಚೆಲ್ಲಿದ್ದು, ಪಪ್ಪಾಯಿ ಗಿಡವನ್ನು ಮುರಿದು ಹಾಕಿದ್ದು ಹಾಗೂ ಇತರ ವಸ್ತುಗಳನ್ನು ಹಗಲು ವೇಳೆಯಲ್ಲಿ ವಿದ್ಯಾರ್ಥಿಗಳು ಪುಡಿಗೈದು ನಾಶ ಮಾಡಿರುವ ಘಟನೆ ನಡೆದಿರುವ ಕುರಿತು ವರದಿಯಾಗಿದೆ.

ಶಾಲೆಯ ನೋಟಿಸ್‌ ಬೋರ್ಡ್‌ಗೆ ಕೂಡಾ ಹಾನಿ ಮಾಡಲಾಗಿದ್ದು, ಶಾಲೆಯ ಬಾಳೆಗಿಡದಲ್ಲಿದ್ದ ಗೊನೆಯನ್ನು ಕೂಡಾ ಕಡಿದು ಶಾಲಾ ಆವರಣದಲ್ಲಿ ಹಾಕಿರುವ ಘಟನೆ ನಡೆದಿದೆ. ಶಾಲೆಯ ಶೌಚಾಲಯದ ಟ್ಯಾಪ್‌ ನ್ನು ಕೂಡಾ ಮುರಿದು ಹಾಕಿದ್ದಾರೆ ಎಂದು ವರದಿಯಾಗಿದೆ.

ಶಾಲಾ ಮುಖ್ಯ ಶಿಕ್ಷಕರು ಶಿವರಾತ್ರಿ ದಿನ ರಜಾ ದಿನವಾದರೂ ಮಧ್ಯಾಹ್ನದವರೆಗೂ ಶಾಲೆಯಲ್ಲಿದ್ದು ನಂತರ ಕೆಲಸಕ್ಕೆ ಪುತ್ತೂರಿಗೆ ಹೋಗಿದ್ದರು. ಅನಂತರ ಈ ಕೃತ್ಯ ನಡೆದಿದೆ. ಶಾಲಾ ಎಸ್‌.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ಊರವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Comments are closed.