Viral Video: ʼಬಿಹಾರವನ್ನು ಭಾರತದಿಂದ ತೆಗೆದು ಹಾಕಿʼ- ಶಿಕ್ಷಕಿಯ ವಿವಾದಾತ್ಮಕ ಹೇಳಿಕೆ

Viral Video: ಬಿಹಾರದ ಶಿಕ್ಷಕಿಯೊಬ್ಬರು ಭಾರತ ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶವಾಗದಿರಲು ಕಾರಣವೇನು ಎನ್ನುವುದಕ್ಕೆ ಕಾರಣವೇನು ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ಬಿಹಾರ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೀಡಿದ ಈ ಹೇಳಿಕೆ ನಿಜಕ್ಕೂ ಶಾಕಿಂಗ್ ಆಗಿದೆ.

Dipali, a Primary Teacher at Kendriya Vidyalaya, was posted in Bihar, where she repeatedly made derogatory remarks against the state and its people.
Now, she has been suspended from her job @bihar_police should also take cognizance of the matter and lodge an FIR against her. pic.twitter.com/A8vkwkpK24
— Shashank Shekhar Jha (@shashank_ssj) February 26, 2025
ದೀಪಾಲಿ ಶಾ ಎನ್ನುವ ಯುವತಿ ಬಿಹಾರದ ಜೆಹನಾಬಾದ್ ಕೇಂದ್ರೀಯ ವಿದ್ಯಾಲಯದ ಪ್ರೊಬೆಷನರಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಷ್ಟಕ್ಕೂ ಈಕೆ ಹೇಳಿದ್ದೇನು?
ಭಾರತ ಅಭಿವೃದ್ಧಿ ಹೊಂದದೇ ಇರಲು ಬಿಹಾರ ರಾಜ್ಯ ಕಾರಣ. ಬಿಹಾರವನ್ನು ಭಾರತದಿಂದ ತೆಗೆದರೆ ನಮ್ಮ ದೇಶ ಅಭಿವೃದ್ಧಿ ಹೊಂದಲಿದೆ. ಬಿಹಾರದ ಜನರಿಗೆ ನಾಗರಿಕ ಪ್ರಜ್ಞೆಯೇ ಇಲ್ಲ. ಬಿಹಾರದ ಜನರು ಭಾರತೀಯ ರೈಲ್ವೇಯನ್ನು ಹಾಳು ಮಾಡಿದ್ದಾರೆ. ನಾನು ಬಿಹಾರದ ಯಾವ ಜಿಲ್ಲೆಯಲ್ಲೂ ಶಿಕ್ಷಕಿಯಾಗಿ ಕೆಲಸ ಮಾಡಲು ಇಷ್ಟ ಪಡುವುದಿಲ್ಲ. ಕೋಲ್ಕತ್ತಾ, ಒಡಿಶಾ, ಹಿಮಾಚಲ ಪ್ರದೇಶ, ಲಡಾಕ್‌ನಂತರ ಸ್ಥಳಗಳಿಗೆ ಹೋಗುತ್ತೇನೆ. ಆದರೆ ಬಿಹಾರದಲ್ಲಿ ಸಾಧ್ಯವೇ ಇಲ್ಲ ಎಂದಿದ್ದಾರೆ.
ಈ ವೀಡಿಯೋ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಇದೀಗ ಶಿಕ್ಷಕಿ ದೀಪಾಲಿ ಶಾ ಅವರನ್ನು ಕೇಂದ್ರೀಯ ವಿದ್ಯಾಲಯ ಸಸ್ಪೆಂಡ್ ಮಾಡಿದ್ದು, ಬಿಹಾರದ ಬೇರೊಂದು ಶಾಲೆಗೆ ಟ್ರಾನ್ಸ್‌ಫರ್ ಮಾಡಲು ಮುಂದಾಗಿರುವ ಕುರಿತು ವರದಿಯಾಗಿದೆ.
Comments are closed.