Mangaluru ಪಾಲಿಕೆ ಬಿಜೆಪಿ ಆಡಳಿತಾವಧಿ ಪೂರ್ಣ

Share the Article

Mangalore: ಫೆ.27 ಕ್ಕೆ ಮಹಾನಗರ ಪಾಲಿಕೆಯ ಪ್ರಸಕ್ತ ಅವಧಿಯ ಬಿಜೆಪಿ ಆಡಳಿತ ಮುಗಿಯಲಿದೆ. ಹೊಸ ಸದಸ್ಯರು ಮುಂದಿನ ಚುನಾವಣೆ ಘೋಷಣೆಯಾಗಿ ಆಯ್ಕೆಯಾಗುವವರೆಗೆ ಆಡಳಿತಾಧಿಕಾರಿಗಳು ಪಾಲಿಕೆಯನ್ನು ಮುನ್ನಡೆಸಲಿದ್ದಾರೆ. ಗುರುವಾರ (ಫೆ.27) ಮೇಯರ್‌ ಮನೋಜ್‌ ಕುಮಾರ್‌ ಕೋಡಿಕಲ್‌ ಅಧ್ಯಕ್ಷತೆಯಲ್ಲಿ ಪಾಲಿಕೆಯ ಕೊನೆಯ ಸಾಮಾನ್ಯ ಸಭೆ ನಡೆಯಿತು.

ನ.27,2019 ರಂದು ಪಾಲಿಕೆ ಚುನಾವಣೆಯು ನಡೆದಿತ್ತು. ಫೆ.27, 2020 ರಂದು ಮೊದಲ ಮೇಯರ್‌ ಅಧಿಕಾರ ಸ್ವೀಕರಿಸಿದರು. ಮೇಯರ್‌ ಮೀಸಲಾತಿ ತಡವಾಗಿದ್ದರಿಂದ ಅಧಿಕಾರ ಸ್ವೀಕಾರ ತಡವಾಗಿ ಆಗಿತ್ತು. ನಂತರ ಐದು ವರ್ಷ ಪಾಲಿಕೆ ಆಡಳಿತ ಅವಧಿ ನಡೆಸಿದ್ದು, ಫೆ.27,2025 ಕೊನೆಯ ದಿನವಾಗಿದೆ.

ಸದ್ಯಕ್ಕೆ ಮುಂದಿನ ಚುನಾವಣೆಯ ಕುರಿತು ಯಾವುದೇ ತಯಾರಿ ನಡೆದಿಲ್ಲ. ಸರಕಾರ ಮೀಸಲಾತಿ ಬಗ್ಗೆ ಹೊರಡಿಸಿಲ್ಲ.

Comments are closed.