Anekal: ಬೈಕ್ ಮೇಲೆ ಜಾಲಿಯಾಗಿ ಪೋಲಿ ರೈಡ್ ಮಾಡಿದ್ದ ಲವರ್ಸ್; ಬಂಧನ

Anekal: ರಾಯಲ್ ಎನ್ಫೀಲ್ಡ್ ಬೈಕ್ನ ಇಂಧನ ಟ್ಯಾಂಕ್ ಮೇಲೆ ತನ್ನ ಲವ್ವರನ್ನು ಕೂರಿಸಿ ಜಾಲಿಯಾಗಿ ಪೋಲಿ ರೈಡ್ ಮಾಡಿದ್ದ ಲವರರನ್ನು ಕೊನೆಗೂ ಪೊಲೀಸರು ಸೆರೆ ಹಿಡಿದಿದ್ದಾರೆ. ಸರ್ಜಾಪುರ ಪೊಲೀಸರು ಬಂಧನ ಮಾಡಿದ್ದಾರೆ.

A reckless bike stunt isn’t a display of love—it’s a violation of the law and a threat to public safety.
Sarjapur Police have registered a case against a techie and his partner for dangerous riding. Strict action will follow.
#FollowTheRules #BengalurudistPolice pic.twitter.com/HWb61mv5PB— SP Bengaluru District Police (@bngdistpol) February 28, 2025
ಸೋಮಪುರದಲ್ಲಿರುವ ಕ್ರಿಸ್ಟಾಲ್ ಅಪಾರ್ಟ್ಮೆಂಟ್ ತಿರುವಿನ ಬಳಿ ಇಬ್ಬರೂ ಜಾಲಿ ರೈಡ್ ಮಾಡಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬೆಂಗಳೂರು -ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಪ್ರೇಮಿಗಳ ಈ ಲವ್ ರೈಡ್ ರಸ್ತೆ ಸುರಕ್ಷತೆಗೆ ಅಪಾಯವನ್ನು ತಂದಿತ್ತು. ಈ ಲವರ್ಸ್ ರೈಡನ್ನು ವೀಡಿಯೋ ಮಾಡಿದ ನಂತರ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಪೊಲೀಸರು ಪ್ರೇಮಿಯನ್ನು ಬಂಧಿಸಿದ್ದಾರೆ.
ಲವರ್ ಬಾಯ್ 25 ವರ್ಷದ ಅಚ್ಯುತ್ ಕುಮಾರ್ ಬಂಧಿತ ಬೈಕ್ ಸವಾರ. ಬೆಂಗಳೂರಿನ ಬೆಳ್ಳಂದೂರು ಬಳಿಯ ಐಯೋಪೆಕ್ಸ್ ಕಂಪನಿಯ ಉದ್ಯೋಗಿ. ನೀಲಕಂಠೇಶ್ವರ ಪಿಜಿಯಲ್ಲಿ ಈತನ ವಾಸ. ತಮಿಳುನಾಡಿನ ನಂಬರ್ ಪ್ಲೇಟ್ ಇದ್ದ ಬುಲೆಟ್ ಬೈಕ್ನಲ್ಲಿ ಪ್ರೇಯಸಿಯನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಉಲ್ಟಾ ಕೂರಿಸಿ ಮಜಾ ಮಾಡಿಕೊಂಡು ಜಾಲಿ ಬೈಕ್ ರೈಡ್ ಮಾಡಿದ್ದ.
ಸರ್ಜಾಪುರ ಪೊಲೀಸರು ಅಪಾಯಕಾರಿ ಸವಾರಿಗಾಗಿ ಟೆಕ್ಕಿ ಮತ್ತು ಆತನ ಪಾರ್ಟ್ನರ್ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಜಿಲ್ಲಾ ಪೊಲೀಸ್ ಎಕ್ಸ್ ಅಕೌಂಟ್ನಿಂದ ಟ್ವೀಟ್ ಮಾಡಲಾಗಿದೆ.
Comments are closed.